ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಪಿಜಿ ಮಾಲೀಕ ಅಶ್ರಫ್ ಬಂಧನ! ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಪಿಜಿ ಮಾಲೀಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಸೋಲದೇವನಹಳ್ಳಿಯಲ್ಲಿ ನಡೆದಿದೆ.
ಪಿಜಿ ಮಾಲೀಕ ಅಶ್ರಫ್ ಬಂಧಿತ ಆರೋಪಿ.
ಈತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ ನಂತರ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ 10 ದಿನಗಳ ಹಿಂದಷ್ಟೇ ಪಿಜಿ ಸೇರಿದ್ದಾಗಿ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
ಸೋಮವಾರ ರಾತ್ರಿ 12-40 ರ ಸುಮಾರಿಗೆ ತನ್ನ ಕೊಠಡಿಗೆ ಬಂದ ಅಶ್ರಫ್, ಆತನೊಂದಿಗೆ ಸಹಕರಿಸಿದರೆ ಉಚಿತ ಊಟ, ವಸತಿ ನೀಡುವುದಾಗಿ ಹೇಳಿದ್ದಾನೆ.
ಅದಕ್ಕೆ ಆಕೆ ನಿರಾಕರಿಸಿದಾಗ ಬಲವಂತವಾಗಿ ಕಾರಿನಲ್ಲಿ ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ದೂರಿನಲ್ಲಿ ಯುವತಿ ಉಲ್ಲೇಖಿಸಿದ್ದಾರೆ.
ಸ್ನೇಹಿತೆಯೊಬ್ಬಳಿಗೆ ಲೋಕೇಷನ್ ಕಳುಹಿಸಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ.
ತದನಂತರ ಸರಿಸುಮಾರು 1.30 ರಿಂದ 2.15 ರ ನಡುವೆ ಅಶ್ರಫ್ ನನ್ನನ್ನು ಮತ್ತೆ ಪಿಜಿಗೆ ಡ್ರಾಪ್ ಮಾಡಿದ್ದಾರೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಯುವತಿ ಆಗ್ರಹಿಸಿದ್ದಾರೆ.
ಒಂದು ತಿಂಗಳ ಹಿಂದೆ ಇದೇ ರೀತಿಯಲ್ಲಿ ಮತ್ತೊಂದು ಪಿಜಿ ಮಾಲೀಕರೊಬ್ಬರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿತ್ತು.
ಇನ್ನೊಬ್ಬ ಮಹಿಳೆಯಿಂದ ಮೂರು ಚಿನ್ನದ ಉಂಗುರಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡ ನಂತರ 21 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ರವಿತೇಜ ರೆಡ್ಡಿ ಎಂಬಾತ ಅತ್ಯಾಚಾರವೆಸಗಿದ್ದ ಆರೋಪ ಕೇಳಿಬಂದಿತ್ತು