ಮಗಳ ಕೆನ್ನೆಗೆ ಮುತ್ತಿಟ್ಟ ಕಿಚ್ಚ ಸುದೀಪ್!

ಮಗಳ ಕೆನ್ನೆಗೆ ಮುತ್ತಿಟ್ಟ ಕಿಚ್ಚ ಸುದೀಪ್​.. ಸಾನ್ವಿಯ ಬ್ಯೂಟಿಫುಲ್​ ಫೋಟೋಸ್​ ಇಲ್ಲಿವೆ!

ಸ್ಯಾಂಡಲ್​ವುಡ್​​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮಗಳು ಸಾನ್ವಿ ಸುದೀಪ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮಲ್ಟಿ ಟ್ಯಾಲೆಂಟೆಡ್‌ ಮತ್ತು ಸಖತ್ ಬ್ಯೂಟಿಫುಲ್‌ ಹುಡುಗಿ ತಮ್ಮ ಹಾಡಿನ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಸಾನ್ವಿ ಮತ್ತೆ ಸುದ್ದಿಯಲ್ಲಿದ್ದಾರೆ.

ಇಂದು ಕಿಚ್ಚ ಸುದೀಪ್​ ಅವರ 47ನೇ ಸಿನಿಮಾ ಅನೌನ್ಸ್​ ಮಾಡಲಾಗಿದೆ. ಇದೇ ಖುಷಿಯಲ್ಲಿ ಕಿಚ್ಚ ಸುದೀಪ್​ ಮಗಳು ಸಾನ್ವಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಶೇರ್ ಮಾಡಿಕೊಂಡ ಫೋಟೋದಲ್ಲಿ ಸಾನ್ವಿ ಹಾಗೂ ಕಿಚ್ಚ ಸುದೀಪ್​ ಒಂದೇ ಬಣ್ಣದ ಬಟ್ಟೆ ತೊಟ್ಟು ಮಿರ ಮಿರ ಮಿಂಚಿದ್ದಾರೆ. ಇನ್ನೂ, ಒಂದು ಫೋಟೋದಲ್ಲಿ ಕಿಚ್ಚ ಸುದೀಪ್​ ಮುದ್ದಾದ ಮಗಳ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ.

ಮತ್ತೊಂದು ಫೋಟೋದಲ್ಲಿ ಮಗಳ ಜೊತೆಗೆ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದಾರೆ. ತಂದೆ ಹಾಗೂ ಮಗಳ ಫೋಟೋ ನೋಡಿದ ಅಭಿಮಾನಿಗಳು ಫುಲ್​ ಖುಷ್ ಆಗಿದ್ದಾರೆ. ಇದೇ ಫೋಟೋ ವೈರಲ್​ ಆಗುತ್ತಿದೆ.

Leave a Reply

Your email address will not be published. Required fields are marked *