ಬೆಂಗಳೂರು ಬಿಟ್ಟು ಹೋಗೋಕೆ ಮನಸ್ಸೇ ಇಲ್ಲ: ಕಣ್ಣೀರಿಟ್ಟ ಮಹಿಳೆ! ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಬರೀ ದೇಶದಲ್ಲಷ್ಟೇ ಅಲ್ಲ, ವಿಶ್ವದಲ್ಲೇ ಗುರುತಿಸಲ್ಪಟ್ಟ ನಗರ. ಇಲ್ಲಿನ ವಾತಾವರಣ ಅದೆಷ್ಟೋ ಮಂದಿಯನ್ನು ಆಕರ್ಷಿಸುತ್ತಿದೆ.
ಉದ್ಯಾನನಗರಿ ಸಿಲಿಕಾನ್ ಸಿಟಿ , ಐಟಿ ಹಬ್, ಸ್ಟಾರ್ಟ್ ಅಪ್ ಹಬ್ ಅಂತೆಲ್ಲ ಕರೆಸಿಕೊಳ್ಳೋ ನಮ್ಮ ಬೆಂಗಳೂರು, ಸರ್ವ ಜನಾಂಗದ ಶಾಂತಿಯ ತೋಟ ಅಂದ್ರೆ ತಪ್ಪಾಗಲಿಕ್ಕಿಲ್ಲ.
ಆದ್ರೆ ಉತ್ತರ ಭಾರತದಿಂದ ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ಬಂದ ಕೆಲವರು ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡೋದು, ಅದನ್ನೇ ದೊಡ್ಡ ಸಾಧನೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾಕೋದು ಇತ್ಯಾದಿ ಮಾಡುತ್ತಾರೆ.
ಇಂತಹ ಜನಗಳ ನಡುವೆ ವಿದೇಶಿ ಮಹಿಳೆಯೊಬ್ಬರು ಬೆಂಗಳೂರಿನ ಬಗ್ಗೆ ಹಾಡಿಹೊಗಳಿದ್ದಾರೆ. ಅಲ್ಲದೇ, ತಮ್ಮ ದೇಶಕ್ಕೆ ವಾಪಸ್ ಹೋಗುವಾಗ ಬೆಂಗಳೂರನ್ನು ಮಿಸ್ ಮಾಡಿಕೊಳ್ತೀನಿ ಅಂತ ಕಣ್ಣೀರು ಹಾಕಿದ್ದಾರೆ!
ಬೆಂಗಳೂರಿಗೆ ಫಿದಾ ಆದ ವಿದೇಶಿ ಮಹಿಳೆ
ಬೆಂಗಳೂರು ಹಾಗೂ ಇಡೀ ಭಾರತದ ಬಗ್ಗೆ ವಿದೇಶಿ ಮಹಿಳಾ ಪ್ರವಾಸಿಗರೊಬ್ಬರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಹೃದಯಸ್ಪರ್ಶಿ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಬೆಂಗಳೂರಿಗೆ ಭಾವನಾತ್ಮಕ ವಿದಾಯ ಹೇಳುತ್ತಿರುವ ವಿದೇಶಿ ಮಹಿಳೆ ಹೆಸರು ಅರಿನಾ. ಬೆಂಗಳೂರಿಗೆ ಭೇಟಿ ಕೊಟ್ಟಿರುವ ಅರಿನಾ, ಬೆಂಗಳೂರು ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.
ಭಾರತ ಅದ್ಭುತವಾದ, ದೈವಿಕ ಶಕ್ತಿ ಹೊಂದಿರೋ ದೇಶ
ಬೆಂಗಳೂರಿನ ಬಗ್ಗೆ ಅರಿನಾ ತಮ್ಮ ವಿಡಿಯೋದಲ್ಲಿ ಬಾವನಾತ್ಮಕವಾಗಿ ಮಾತನಾಡಿದ್ದಾರೆ. ಇದು ನೀವು ಯಾವುದೇ ಸೋಶಿಯಲ್ ಮೀಡಿಯಾಗಳಲ್ಲಿ ಎಂದೂ ನೋಡಿರದ ಭಾರತ.
ನಾನು ಬೆಂಗಳೂರಿನಲ್ಲಿ 15 ದಿನಗಳನ್ನು ಕಳೆದಿದ್ದೇನೆ ಮತ್ತು ಈಗ ನಾನು ಭಾರತಕ್ಕೆ ನನ್ನ ಮೂರನೇ ಪ್ರಯಾಣವನ್ನು ಮಾಡಿದ್ದೇನೆ.
ನಾನು ಈ ದೇಶವನ್ನು ಸಂಪೂರ್ಣವಾಗಿ ಪ್ರೀತಿಸುತ್ತಿದ್ದೆ. ಭಾರತ ತುಂಬಾ ಅದ್ಭುತವಾಗಿದೆ. ಇದು ತುಂಬಾ ದೈವಿಕ ಶಕ್ತಿ ಕೂಡ ಹೊಂದಿರೋ ದೇಶ ಅಂತ ಅರಿನಾ ಹೊಗಳಿದ್ದಾರೆ.