ಬೆಂಗಳೂರಿನ ಸವಾರರಿಗೆ ಗುಡ್ನ್ಯೂಸ್-ದಂಡ ಪಾವತಿಗೆ 50% ಡಿಸ್ಕೌಂಟ್! ಆ.23ರಿಂದ ಸೆ.12ರವರೆಗೆ ಪಾವತಿಸಲು ಡೆಡ್ಲೈನ್!
ಬೆಂಗಳೂರು: ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಗುಡ್ ನ್ಯೂಸ್ ಕೊಟ್ಟಿದ್ದು, ನಿಯಮ ಉಲ್ಲಂಘಿಸಿದ್ರೆ ಶೇ.50ರಷ್ಟು ದಂಡ ಕಟ್ಟಲು ಅವಕಾಶ ನೀಡಿದ್ದಾರೆ.
ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅವರು ಆದೇಶ ಹೊರಡಿಸಿದ್ದು, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದಾರೆ.
ಲವು ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಉಳಿಸಿಕೊಂಡವರಿಗೆ ಈ ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಮೊತ್ತದ ದಂಡ ಸಂಗ್ರಹಿಸಿತ್ತು.
ಈ ಆದೇಶದಂತೆ ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.