
PM Modi’s gift to Ghana President: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ 5 ದೇಶಗಳ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಭಾಗವಾಗಿ ಮೊದಲಿಗೆ ಘಾನಾ ದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಕರ್ನಾಟಕದ ಬೀದರ್ನಲ್ಲಿ ತಯಾರಾದ ಒಂದು ಸೊಗಸಾದ ಬಿದ್ರಿವೇರ್ ಹೂವಿನ ಹೂದಾನಿಗಳನ್ನು ಉಡುಗರೆಯಾಗಿ ನೀಡಿದ್ದಾರೆ. ಹಾಗಾಗಿ, ವಿಶ್ವ ವಿಖ್ಯಾತ ಬೀದರ್ನ ಬಿದ್ರಿವೇರ್ ಕಲೆಯ ಕುರಿತು ಮಾಹಿತಿ ಇಲ್ಲಿದೆ:
ನ್ನು ಪ್ರಧಾನಿ ಮೋದಿ ಅವರ ಈ ಭೇಟಿಯು 30 ವರ್ಷಗಳ ನಂತರ ಭಾರತದ ಪ್ರಧಾನಮಂತ್ರಿಯೊಬ್ಬರು ಘಾನಾಕ್ಕೆ ನೀಡಿದ ಮೊದಲ ದ್ವಿಪಕ್ಷೀಯ ಭೇಟಿಯಾಗಿದ್ದು, ಈ ವೇಳೆ, ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಂದ ಘಾನಾ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇದಾದ ನಂತರ ಪ್ರಧಾನಿ ಮೋದಿ ಅವರು ಘಾನಾದ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಅವರಿಗೆ ಬಿದ್ರಿವೇರ್ ಹೂವಿನ ಹೂದಾನಿಗಳು ಹಾಗೂ ಅವರ ಪತ್ನಿ ಲಾರ್ಡಿನಾ ಮಹಾಮಾ ಅವರಿಗೆ ಸೊಗಸಾದ ಸಿಲ್ವರ್ ಫಿಲಿಗ್ರೀ ವರ್ಕ್ ಪರ್ಸ್ ಅನ್ನು ಉಡುಗರೆಯಾಗಿ ನೀಡಿದ್ದಾರೆ. ಇನ್ನು ಈ ಸಿಲ್ವರ್ ಫಿಲಿಗ್ರೀ ವರ್ಕ್ ಪರ್ಸ್, ಒಡಿಶಾದ ಕಟಕ್ನ ಪ್ರಸಿದ್ಧ ತಾರಕಾಸಿ ಕರಕುಶಲತೆಯ ಅದ್ಭುತವಾಗಿದೆ. ಹಾಗಾಗಿ, ವಿಶ್ವ ವಿಖ್ಯಾತ ಬೀದರ್ನ ಬಿದ್ರಿವೇರ್ ಕಲೆಯ ಕುರಿತು ಮಾಹಿತಿ ಇಲ್ಲಿದೆ: