ಬೆಂಗಳೂರು: ವಿಐಪಿಗಳ ಸಂಚಾರದ ವೇಳೆ ವಾಹನಗಳು ಸೈರನ್ ಬಳಕೆ ನಿಷೇಧಿಸಿ ಡಿಜಿ ಅಂಡ್ ಐಜಿಪಿ ಸಲೀಂ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲಾ ಘಟಕಾಧಿಕಾರಿಗಳಿಗೆ ಆದೇಶ ನೀಡಿರುವ ಅವರು, ವಿಐಪಿ ವಾಹನಗಳ ಸೈರನ್ ಬಳಕೆಯಿಂದ ಗಣ್ಯ ವ್ಯಕ್ತಿಗಳ ಓಡಾಟದ ಮಾಹಿತಿ ಲಭ್ಯವಾಗುತ್ತದೆ.
ಇದರಿಂದ ಶಬ್ಧ ಮಾಲಿನ್ಯ ಹಾಗೂ ಇತರ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ. ಹೀಗಾಗಿ ಸೈರನ್ ಬಳಕೆಗೆ ಕಡಿವಾಣ ಹಾಕಿ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಅಲ್ಲದೇ ವಿಐಪಿ ಸಂಚಾರದ ವೇಳೆ ವೈರ್ಲೆಸ್ ಕಮ್ಯುನಿಕೇಷನ್ ಪರಿಣಾಮಕಾರಿಯಾಗಿ ಬಳಸುವಂತೆ ಸೂಚಿಸಿದ್ದು, ಅಂಬುಲೆನ್ಸ್, ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಳಸುವಂತೆ ಸೂಚಿಸಿದ್ದಾರೆ.