
UK ಅಲ್ಲೂ ಸು ಫ್ರಮ್ ಸೋ ರಿಲೀಸ್ಈ.. ವಿಷಯವನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಕನ್ನಡದ ಸು ಫ್ರಮ್ ಸೋ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಉತ್ತರ ಭಾರತದಲ್ಲಿ ಈಗಾಗಲೇ ಕನ್ನಡದಲ್ಲಿಯೇ ರಿಲೀಸ್ ಆಗಿದೆ.
ಸಾಗರೋತ್ತರದಲ್ಲೂ ಈ ಸಿನಿಮಾ ತೆರೆ ಕಾಣುತ್ತಿದೆ. ಆ ಲೆಕ್ಕದಲ್ಲಿಯ UK ಅಲ್ಲೂ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಈ ಮೂಲಕ ಸು ಫ್ರಮ್ ಸೋ ವಿದೇಶಲ್ಲೂ ತನ್ನ ಹಾಸ್ಯದ ಹೊನಲು ಹರಿಸಲಿದೆ. Dream ZE ಈ ಚಿತ್ರವನ್ನ ರಿಲೀಸ್ ಮಾಡುತ್ತಿದೆ. ಈ ವಿಷಯವನ್ನ ಸಿನಿಮಾ ತಂಡ ಅಧಿಕೃತವಾಗಿಯೇ ಹೇಳಿಕೊಂಡಿದೆ. ಈ ಕುರಿತ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.
ಕೇರಳದಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ. ನಟ ದುಲ್ಕರ್ ಸಲ್ಮಾನ್ ಅವರ ಸಂಸ್ಥೆಯಿಂದಲೇ ಈ ಚಿತ್ರವನ್ನ ರಿಲೀಸ್ ಮಾಡಲಾಗುತ್ತಿದೆ. ವಿಶೇಷ ಅಂದ್ರೆ ಕನ್ನಡದ ಈ ಚಿತ್ರ ಮಲೆಯಾಳಂ ಭಾಷೆಯಲ್ಲಿಯೇ ಡಬ್ ಆಗಿದೆ.
ಆಗಸ್ಟ್-1 ರಂದೇ ಮಲೆಯಾಳಂ ಭಾಷೆಯಲ್ಲಿ ಸು ಫ್ರಮ್ ಸೋ ತೆರೆಗೆ ಬರ್ತಿದೆ. ಈ ರೀತಿ ಸು ಫ್ರಮ್ ಸೋ ಚಿತ್ರ ಎಲ್ಲೆಡೆ ತನ್ನ ಕ್ರೇಜ್ ಕ್ರಿಯೇಟ್ ಮಾಡುತ್ತಿದೆ ಅಂತಲೇ ಹೇಳಬಹುದು.
ಮೂರು ದಿನಕ್ಕೆ ಕೋಟಿ ಕೋಟಿ ಕಲೆಕ್ಷನ್
ಸು ಫ್ರಮ್ ಸೋ ಚಿತ್ರದ ಕಲೆಕ್ಷನ್ ಮೂರು ದಿನಕ್ಕೆ 6 ಕೋಟಿ ಅನ್ನುವ ಅಂದಾಜು ಲೆಕ್ಕವೂ ಇದೆ. ರಿಲೀಸ್ ಆದ ಮೂರೇ ದಿನಕ್ಕೆ ಇಷ್ಟೊಂದು ಕಲೆಕ್ಷನ್ ಆಗಿರೋದು ಎಲ್ಲರ ಗಮನ ಸೆಳೆಯುತ್ತಿದೆ.
ಶೋಗಳು ಕೂಡ ಎಲ್ಲೆಡೆ ಜಾಸ್ತಿನೇ ಆಗುತ್ತಿವೆ. ರಿಲೀಸ್ ಆದ ಥಿಯೇಟರ್ಗಳ ಒಟ್ಟು ಸಂಖ್ಯೆ 115ಇದೆ ಅನ್ನೋ ಮಾಹಿತಿ ಸಿಗುತ್ತದೆ.
ಈ ಚಿತ್ರ ಮೊದಲ ದಿನ 75 ಥಿಯೇಟರ್ ಅಲ್ಲಿ ಮಾತ್ರ ರಿಲೀಸ್ ಆಗಿತ್ತು. ಎರಡನೇ ದಿನ ಅದು ಜಾಸ್ತಿನೇ ಆಯಿತು.
ಹಾಗಾಗಿಯೇ ರಾಜಾದ್ಯಂತ ಈಗ ಒಟ್ಟು 115 ಥಿಯೇಟರ್ಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ ಅಂತಲೂ ಹೇಳಬಹುದು