
ಅಮೆರಿಕ ಮೇಲೆ ಇತರೆ ರಾಷ್ಟ್ರಗಳು ಹೇರುತ್ತಿರುವ ಸುಂಕ ನೀತಿ ವಿರುದ್ದ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ರಾಷ್ಟ್ರಗಳ ವಿರುದ್ದ ಹೊಸ ತೆರಿಗೆ ನೀತಿಯನ್ನು ಘೋಷಿಸಿದ್ದಾರೆ.
ಅದರಂತೆ, ಇಂದು ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಆಮದುಗಳ ಮೇಲೆ 25% ತೆರಿಗೆ ವಿಧಿಸುವ ಸುಂಕ ಪತ್ರಗಳನ್ನು ಕಳುಹಿಸಿದ್ದಾರೆ.
ವಾಷಿಂಗ್ಟನ್ (ಅಮೆರಿಕ): ಅಮೆರಿಕ ಮೇಲೆ ಇತರೆ ರಾಷ್ಟ್ರಗಳು ಹೇರುತ್ತಿರುವ ಸುಂಕ ನೀತಿ ವಿರುದ್ದ ಸಮರ ಸಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ರಾಷ್ಟ್ರಗಳ ವಿರುದ್ದ ಹೊಸ ತೆರಿಗೆ ನೀತಿಯನ್ನು ಘೋಷಿಸಿದ್ದಾರೆ.
ಅದರಂತೆ, ಇಂದು ಜಪಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಆಮದುಗಳ ಮೇಲೆ 25% ತೆರಿಗೆ ವಿಧಿಸುವ ಸುಂಕ ಪತ್ರಗಳನ್ನು ಕಳುಹಿಸಿದ್ದಾರೆ.
ಏತನ್ಮಧ್ಯೆ, ವ್ಯಾಪಾರ ಪಾಲುದಾರಿಗೆ ಹೊಸ ಒಪ್ಪಂದಗಳನ್ನು ತಲುಪಲು ನೀಡಿದ್ದ ಗಡುವು ಮುಗಿಯುವ ಕೆಲವು ದಿನಗಳ ಮೊದಲೇ ಟ್ರಂಪ್ ಸರ್ಕಾರದಿಂದ ಈ ನಿರ್ಧಾರ ಹೊರ ಬಂದಿದೆ.
ತಮ್ಮ ಸಾಮಾಜಿಕ ಜಾಲತಾಣವಾದ ಟ್ರೂತ್ ಸೋಶಿಯಲ್ನಲ್ಲಿ, ಹೊಸ ಸುಂಕ ದರಗಳನ್ನು ವಿಧಿಸುವ ತನ್ನ ಕ್ರಮದ ಬಗ್ಗೆ ಜಪಾನ್ ಪ್ರಧಾನಿ ಇಶಿಬಾ ಶಿಗೇರು ಮತ್ತು ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರಿಗೆ ಕಳುಹಿಸಿದ ಪತ್ರಗಳ ಸ್ಕ್ರೀನ್ಶಾಟ್ಗಳನ್ನು ಟ್ರಂಪ್ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು,
ಇದರಲ್ಲಿ ಜಪಾನ್ ಮತ್ತು ದಕ್ಷಿಣ ಕೊರಿಯಾ ಮೇಲೆ ಅಮೆರಿಕ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಲಿದೆ ಎಂದು ಹೇಳಲಾಗಿದೆ. ಅದರಂತೆ, ಹೊಸ ಸುಂಕ ದರಗಳು ಆಗಸ್ಟ್ 1, 2025 ರಿಂದ ಜಾರಿಗೆ ಬರಲಿವೆ.
ಇದರೊಂದಿಗೆ, ಹೊರಡಿಸಲಾಗುವ ಸುಂಕ ಪತ್ರವು ಮಾತುಕತೆಗೆ ಒಳಪಡುವುದಿಲ್ಲ ಮತ್ತು ಬಯಸಿದಲ್ಲಿ ಅದನ್ನು ಸ್ವೀಕರಿಸಬಹುದು ಅಥವಾ ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದ್ದರು.
ಪತ್ರದಲ್ಲಿ ಏನಿದೆ…..
ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರಿಗೆ ಬರೆದ ಪತ್ರದಲ್ಲಿ ಟ್ರಂಪ್ ಸ್ಪಷ್ಟವಾಗಿ, “ಆಗಸ್ಟ್ 1 ರಿಂದ,
ಜಪಾನ್ನಿಂದ ಅಮೆರಿಕಕ್ಕೆ ಬರುವ ಪ್ರತಿಯೊಂದು ವಸ್ತುವು ಯಾವುದೇ ಉತ್ಪನ್ನವಾಗಿದ್ದರೂ ಸಹ 25% ಸುಂಕಕ್ಕೆ ಒಳಪಟ್ಟಿರುತ್ತದೆ.
ಹೆಚ್ಚಿನ ಸುಂಕವನ್ನು ತಪ್ಪಿಸಲು ಯಾರಾದರೂ ಬುದ್ಧಿವಂತರಾಗಲು ಪ್ರಯತ್ನಿಸಿದರೆ, ಅವರ ಮೇಲೂ ಅದೇ ಭಾರೀ ಸುಂಕವನ್ನು ವಿಧಿಸಲಾಗುತ್ತದೆ” ಎಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾಕ್ಕೂ ಇದೇ ರೀತಿಯ ಪತ್ರ ಬಂದಿದೆ. ಪ್ರತಿಕ್ರಿಯೆಯಾಗಿ ಅವರು ತಮ್ಮ ಸುಂಕಗಳನ್ನು ಹೆಚ್ಚಿಸಿದರೆ,
ಅಮೆರಿಕವು ತನ್ನ 25% ಸುಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಟ್ರಂಪ್ ಎರಡೂ ದೇಶಗಳನ್ನು ಎಚ್ಚರಿಸಿದ್ದಾರೆ.
ಅಂದರೆ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿನ ಕಾರುಗಳು ಮತ್ತು ಎಲೆಕ್ಟ್ರಾನಿಕ್ಸ್ನಂತಹ ಕೈಗಾರಿಕೆಗಳು ಕಠಿಣ ಸಮಯವನ್ನು ಎದುರಿಸಬಹುದು,
ಏಕೆಂದರೆ ಈ ಎರಡೂ ದೇಶಗಳು ಚೀನಾ ವಿರುದ್ಧ ಅಮೆರಿಕದ ದೊಡ್ಡ ಮಿತ್ರರಾಷ್ಟ್ರಗಳಾಗಿವೆ.