ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ. ಎಂದು ಬರೆದುಕೊಂಡಿದೆ ಟೀಂ.
ಕಾತುರದಿಂದ ಕಾಯುತ್ತಿರುವ ದರ್ಶನ್ ಫ್ಯಾನ್ಸ್ಗೆ ಅಂತೂ ಗುಡ್ ನ್ಯೂಸ್ ಸಿಕ್ಕಿದೆ. ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಔಟ್ ಆಗಿದೆ. ದರ್ಶನ್ ಅವರ ಖಡಕ್ ಲುಕ್ಗೆ ಫಿದಾ ಆಗಿದ್ದಾರೆ ಫ್ಯಾನ್ಸ್.
ಈಗಾಗಲೇ ಡೆವಿಲ್ ಪ್ರಮೋಷನ್ ಗೆ ಕಿಕ್ ಸ್ಟಾರ್ಟ್ ಆಗಿದೆ. ಹಾಗಾದ್ರೆ ಡೆವಿಲ್ ಸಿನಿಮಾ ರಿಲೀಸ್ ಯಾವಾಗ?
ಹೌದು ದರ್ಶನ್ ನಟನೆಯ ಡೆವಿಲ್ ಸಿನಿಮಾದ ಮೋಷನ್ ಪೊಸ್ಟರ್ ಔಟ್ ಆಗಿದೆ. ಕೈಯಲ್ಲಿ ಸಿಗರೆಟ್ ಹಿಡಿದು ಮಾಸ್ ಪೋಸ್ ಕೊಟ್ಟಿದ್ದಾರೆ.
ಅದರಲ್ಲೂ ಬ್ಯಾಕ್ರೌಂಡ್ ಮ್ಯೂಸಿಕ್ ಲುಕ್ ತಕ್ಕಂತೆ ಸಾಥ್ ಕೊಟ್ಟಂತಿದೆ. ಇದೀಗ ದರ್ಶನ್ ಅವರು ಇನ್ಸ್ಟಾದಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ.
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ. ಎಂದು ಬರೆದುಕೊಂಡಿದೆ.
ಟೀಂ.ದರ್ಶನ್ ಜೋಡಿಯಾಗಿ ನಟಿ ರಚನಾ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದಿ ಡೆವಿಲ್’ ಇದು ‘ಜೈ ಮಾತಾ ಕಂಬೈನ್ಸ್’ ನಿರ್ಮಾಣದ ಚಿತ್ರ.
ಥೈಲ್ಯಾಂಡ್ನಲ್ಲಿ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ರಚನಾ ರೈ ನಾಯಕಿ ಆಗಿರೋ ಸಿನಿಮಾದ ಚಿತ್ರೀಕರಣ ಇದೀಗ ವಿದೇಶಕ್ಕೂ ಕಾಲಿಟ್ಟಿದೆ.
ಥೈಲ್ಯಾಂಡ್ ನಲ್ಲಿ ದರ್ಶನ್
ನಟ ದರ್ಶನ್ ‘ಡೆವಿಲ್’ ಸಿನಿಮಾದ ಹಾಡಿನ ಶೂಟ್ಗಾಗಿ ಥೈಲ್ಯಾಂಡ್ ನಲ್ಲಿದ್ದಾರೆ. ಶೂಟಿಂಗ್ ಮಧ್ಯೆ ಅವರು ಸ್ನೇಹಿತರು, ಸಿನಿಮಾ ತಂಡದವರ ಜೊತೆ ಮೋಜು-ಮಸ್ತಿ ಮಾಡುತ್ತಿರುವ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.