Su From So Movie ನೋಡಿ ಹೊಗಳಿದ ಬಾಲಿವುಡ್ ಅಜಯ್ ದೇವ್ಗನ್! ಕಂಟೆಂಟ್ ಚೆನ್ನಾಗಿದ್ರೆ ವೀಕ್ಷಕರು ಥಿಯೇಟರ್ಗೆ ಒಂದಲ್ಲ, 2 ಬಾರಿ ಬರ್ತಾರೆ, ಅದ್ಯಾವುದೇ ಭಾಷೆ ಇರಲೀ
ಕೆಲವು ನಟರೆಲ್ಲ ಹೊಸಬರಿದ್ದರೂ ಪರವಾಗಿಲ್ಲ ಎನ್ನೋದಿಕ್ಕೆ ʼಸು ಫ್ರಂ ಸೋʼ (Su From So) ಉತ್ತಮ ಉದಾಹರಣೆ.
ನಟ ಅಜಯ್ ದೇವ್ಗನ್ ಈ ಸಿನಿಮಾ ತಂಡವನ್ನು ಮುಂಬೈಗೆ ಕರೆಸಿಕೊಂಡು ಭೇಷ್ ಎಂದಿದ್ದಾರೆ.
ಹೌಸ್ಫುಲ್ ಪ್ರದರ್ಶನ ಕಾಣ್ತಿರೋ ಸಿನಿಮಾ!
ಈಗ ಈ ಅಪ್ಪಟ ಕನ್ನಡ ಸಿನಿಮಾವನ್ನು ಬೇರೆ ಭಾಷೆಯ ಕಲಾವಿದರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ.
ಜುಲೈ 25ಕ್ಕೆ ‘Su From So Movie’ ರಿಲೀಸ್ ಆಗಿತ್ತು.
ಅದಕ್ಕೂ ಮೊದಲು ಈ ಸಿನಿಮಾದ ಪ್ರೀಮಿಯರ್ ಶೋ ಆಗಿದೆ. ಪ್ರೀಮಿಯರ್ ಶೋನಲ್ಲಿಯೇ ಈ ಚಿತ್ರವನ್ನು ವೀಕ್ಷಕರು ಮೆಚ್ಚಿದ್ದರು.
ಆ ಬಳಿಕ ಥಿಯೇಟರ್ನಲ್ಲಿ ಹಗಲು-ರಾತ್ರಿ, ವೀಡ್ ಡೇಸ್, ವೀಕೆಂಡ್ನಲ್ಲಿಯೂ ಹೌಸ್ಫುಲ್ ಪ್ರದರ್ಶನ ಕಾಣಲು ಆರಂಭವಾಯ್ತು.
ಮುಂಬೈನಲ್ಲಿ ವಿಶೇಷ ಶೋ ಏರ್ಪಡಿಸಲಾಗಿತ್ತು!
ಈ ಸಿನಿಮಾ ಕಲಾವಿದರು ಮುಂಬೈಗೆ ಭೇಟಿ ನೀಡಿ, ಅಲ್ಲಿನ ಖ್ಯಾತ ನಟರು ಮತ್ತು ನಿರ್ಮಾಪಕರಿಗಾಗಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಿದ್ದರು.
ಈ ಸಿನಿಮಾವನ್ನು ವೀಕ್ಷಿಸಿದ ನಟ ಅಜಯ್ ದೇವ್ಗನ್ ಅವರು ಈ ಸಿನಿಮಾ ತಂಡದ ಜೊತೆ ಮಾತುಕತೆ ನಡೆಸಿದ್ದಾರೆ.
ಅಜಯ್ ದೇವ್ಗನ್ ಅವರು ನಿರ್ದೇಶಕ ಜೆಪಿ ಥುಮಿನಾಡ್, ರಾಜ್ ಬಿ ಶೆಟ್ಟಿ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ.
ಈ ಫೋಟೋ ನೋಡಿದಾಗ ದೇವ್ಗನ್ ಅವರು ಈ ಸಿನಿಮಾವನ್ನು ಇಷ್ಟಪಟ್ಟಿರೋದು, ಅವರ ಮೇಲೆ ಈ ಸಿನಿಮಾ ಗಾಢವಾದ ಪ್ರಭಾವ ಬೀರಿರೋದು ಮೇಲ್ನೋಟಕ್ಕೆ ಕಾಣಿಸುವುದು.
ಇದು ಸಹಜ ಭೇಟಿ ಅಲ್ಲ!
ಈ ಭೇಟಿಯನ್ನು ಕೇವಲ ಪ್ರದರ್ಶನವೊಂದೇ ಅಲ್ಲ, ಬದಲಿಗೆ ಹೆಚ್ಚಿನದ್ದು ಎಂದು ಕೆಲ ಮೂಲಗಳು ಹೇಳಿವೆ. ಈ ಸಿನಿಮಾವು ಹಿಂದಿಗೆ ರಿಮೇಕ್ ಆಗಲಿದೆಯಾ ಎಂಬ ಅನುಮಾನ ಕೂಡ ಶುರುವಾಗಿದೆ.
ಕನ್ನಡದಲ್ಲಿ ತಯಾರಾದ ಕಾಂತಾರ ಸಿನಿಮಾವು ತನ್ನ ಕಂಟೆಂಟ್ನಿಂದ ಹೇಗೆ ಬೇರೆ ಭಾಷೆಗೆ ಡಬ್ ಆಗಿ ಬಾಕ್ಸ್ ಆಫೀಸ್ ಯಶಸ್ಸು ಕಂಡಿತು ಎಂದು ಎಲ್ಲರೂ ನೋಡಿದ್ದೀರಿ.
ಹಾಗೆ ಈ ಸಿನಿಮಾ ರಿಮೇಕ್ ಆಗಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಸಿನಿಮಾ ತಂಡ ಉತ್ತರ ಕೊಡಬೇಕಿದೆ.
ಸೂಪರ್ ಹಿಟ್ ಸಿನಿಮಾಗಳ ಜೊತೆ ಸ್ಪರ್ಧೆ!
ʼಸೈಯಾರಾʼ, ಹಾಲಿವುಡ್ನ ʼಎಫ್1ʼ, ಪವನ್ ಕಲ್ಯಾಣ್ ಅವರ ʼಹರಿ ಹರ ವೀರ ಮಲ್ಲುʼ ಸಿನಿಮಾಗಳ ನಡುವೆ ಬಿಡುಗಡೆಯಾದ
Su From So Movie ಗಟ್ಟಿಯಾಗಿ ನಿಂತು, ವೀಕ್ಷಕರ ಮನಸ್ಸಿನಲ್ಲಿ ಡ್ಯಾನ್ಸ್ ಮಾಡುತ್ತಿದೆ.