
RCBಯಲ್ಲಿ ಟ್ರೋಫಿ ಗೆದ್ದ ಬಳಿಕ ಜಿತೇಶ್ ಶರ್ಮಾ ದೊಡ್ಡ ನಿರ್ಧಾರ, ಜಿತೇಶ್ ಶರ್ಮಾ ಭಾರತ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ, ಈ ನಿಟ್ಟಿನಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮಾತ್ರವಲ್ಲ, ಮುಂಬರುವ ಐಪಿಎಲ್ ಸೀಸನ್ಗೂ ಮುನ್ನ ಅವರು ತಮ್ಮ ಆಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ, ಜಿತೇಶ್ ಶರ್ಮಾ (Jitesh Sharma) ಭಾರತ ತಂಡಕ್ಕೆ ಮರಳುವ ಕಾತರದಲ್ಲಿದ್ದಾರೆ.
ಈ ನಿಟ್ಟಿನಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮಾತ್ರವಲ್ಲ, ಮುಂಬರುವ IPL ಸೀಸನ್ಗೂ ಮುನ್ನ ಅವರು ತಮ್ಮ ಆಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಮುಂದಾಗಿದ್ದಾರೆ.
ಹಾರ್ದಿಕ್ ಪಾಂಡ್ಯ ಜೊತೆ ಆಡಲಿದ್ದಾರೆ ಜಿತೇಶ್
ಇಎಸ್ಪಿಎನ್ಕ್ರಿಕ್ಇನ್ಫೊ ವರದಿಯ ಪ್ರಕಾರ, ಜಿತೇಶ್ ಶರ್ಮಾ 2025-26ರ ದೇಶೀಯ ಋತುವಿಗೆ ಮುಂಚಿತವಾಗಿ ವಿದರ್ಭ ತಂಡವನ್ನು ತೊರೆದು ಬರೋಡಾ ಪರ ಆಡಲಿದ್ದಾರೆ.
ಜಿತೇಶ್ ಶರ್ಮಾ ಸದ್ಯ ಕೃನಾಲ್ ಪಾಂಡ್ಯ ಅವರ ನಾಯಕತ್ವದಲ್ಲಿ ಆಡಲು ಮುಂದಾಗಿದ್ದಾರೆ. 2025 ರ ಐಪಿಎಲ್ನಲ್ಲಿ ಆರ್ಸಿಬಿ ಪರ ಒಟ್ಟಿಗೆ ಆಡಿದ್ದ ಕೃನಾಲ್ ಪಾಂಡ್ಯ ಅವರೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ.
ಈ ನಡೆಯಿಂದ ಜಿತೇಶ್ ಈಗ ಕೃನಾಲ್ ಅವರ ಸಹೋದರ ಟೀಮ್ ಇಂಡಿಯಾ ಸೂಪರ್ಸ್ಟಾರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಸಹ ಆಟಗಾರನಾಗಿ ಆಡಲಿದ್ದಾರೆ.