
ಬೆಂಗಳೂರು: ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ಏಕ ಸದಸ್ಯ ಅಯೋಗ ರಚನೆ ಮಾಡಲಾಗಿತ್ತು. ಈಗ ಕುನ್ಹಾ ಅವರು, ಸಿಎಂಗೆ ವರದಿ ಕೊಟ್ಟಿದ್ದಾರೆ. ವರದಿಯಲ್ಲಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಸಮಿತಿ ಶಿಫಾರಸು ಮಾಡಿದೆ. ಹೆಚ್ಚುವರಿ ತನಿಖೆಗೂ ಸಲಹೆ ನೀಡಿದೆ. ಘಟನೆಗೆ ಪೊಲೀಸರ ವೈಫಲ್ಯವೂ ಇದೆ. ಜೊತೆಗೆ, ಕಾರ್ಯಕ್ರಮದ ಆಯೋಜಕರು ಕಾರಣಕರ್ತರು ಅಂತ ವರದಿಯಲ್ಲಿ ಹೇಳಲಾಗಿದೆ ಅಂತ ತಿಳಿದು ಬಂದಿದೆ.
ಈ ವರದಿಯ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದರು. 2 ವಾಲ್ಯೂಮ್ನಲ್ಲಿ ವರದಿ ಕೊಟ್ಟಿದ್ದಾರೆ. ನನಗೆ ಪೂರ್ಣ ವರದಿ ಓದಲು ಆಗಿಲ್ಲ. ವರದಿಯಲ್ಲಿ ಏನಿದೆ ಎಂದು ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.