RCB ಸೇರಿದ ವೆಂಕಟೇಶ್ ಅಯ್ಯರ್..

RCB ಸೇರಿದ ವೆಂಕಟೇಶ್ ಅಯ್ಯರ್..

ವೆಂಕಟೇಶ್ ಅಯ್ಯರ್ (Venkatesh Iyer) ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಹೊರತುಪಡಿಸಿ ಬೇರೆ ಐಪಿಎಲ್ ತಂಡಕ್ಕೆ ಆಡಲಿದ್ದಾರೆ. ಕೆಕೆಆರ್ ಕೂಡ ಹರಾಜಿನಲ್ಲಿ ಅವರನ್ನು ಆಯ್ಕೆ ಮಾಡಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡ್ ಗೆದ್ದಿದೆ. ಕಳೆದ ವರ್ಷ ಕೆಕೆಆರ್​​ನಲ್ಲಿ ಅವರು 23.75 ಕೋಟಿ ರೂಪಾಯಿ ಸಂಬಳ ಪಡೆದಿದ್ದರು. ಈ ಬಾರಿ ಅವರ ವ್ಯಾಲ್ಯೂ 10 ಕೋಟಿಗಿಂತ ಕಡಿಮೆಯಾಗಿದೆ. 

ವೆಂಕಟೇಶ್ ಅಯ್ಯರ್ IPL 2026 ಬೆಲೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ವೆಂಕಟೇಶ್ ಅಯ್ಯರ್ ಅವರನ್ನು 7 ಕೋಟಿಗೆ ಖರೀದಿಸಿದೆ. ಅವರ ಚೊಚ್ಚಲ ಐಪಿಎಲ್‌ ಜರ್ನಿಯಿಂದಲೂ ಅಯ್ಯರ್ ಕೆಕೆಆರ್‌ನಲ್ಲಿದ್ದರು. ಈಗ ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ. ಅಯ್ಯರ್ ಅವರ ಮೂಲ ಬೆಲೆ 2 ಕೋಟಿ  ರೂಪಾಯಿ ಆಗಿತ್ತು. ಅವರ ಸಂಬಳ ಕಳೆದ ವರ್ಷಕ್ಕಿಂತ ₹16.75 ಕೋಟಿ ಕಡಿಮೆಯಾಗಿದೆ.