
ಲೈಬ್ರರಿಯ ಕ್ಲರ್ಕ್ ಆದ ಪ್ರಜ್ವಲ್ ರೇವಣ್ಣ – ದಿನಕ್ಕೆ 522 ರೂ. ಸಂಬಳ! ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ (Rape Case) ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪರಪ್ಪನ ಅಗ್ರಹಾರದಲ್ಲಿ (Parappana Agrhara) ಸಾಮಾನ್ಯ ಕೈದಿಗಳಂತೆ ತಮ್ಮ ತಪ್ಪಿಗೆ ಶಿಕ್ಷೆಯನ್ನ ಅನುಭವಿಸುತ್ತಿದ್ದಾರೆ.
ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಲೈಬ್ರರಿಯ ಕ್ಲರ್ಕ್ (Library Clerk) ಆಗಿ ನೇಮಿಸಿದ್ದು, ಪುಸ್ತಕಗಳನ್ನು ಕೊಡುವುದು ಹಾಗೂ ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ.
ಸದ್ಯ ಒಂದು ದಿನದ ಮಟ್ಟಿಗೆ ಪ್ರಜ್ವಲ್ ಕೆಲಸ ಮಾಡಿದ್ದು, ದಿನಗೂಲಿಯಾಗಿ ದಿನಕ್ಕೆ 522 ರೂ. ಗಳನ್ನ ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ನೀಡಲಾಗುವುದಿಲ್ಲ.
ಟ್ರಯಲ್ ಕೋರ್ಟ್ಗೆ ಆಗಾಗ ಬರಬೇಕಾಗಿರುವುದರಿಂದ ಹಾಗೂ ವಕೀಲರ ಜೊತೆ ಇತರೇ ಕೇಸ್ಗಳ ಸಂಬಂಧ ಚರ್ಚೆ ಮಾಡಬೇಕಾಗಿರುವ ಕಾರಣ ಪ್ರಜ್ವಲ್ ರೇವಣ್ಣ ಅವರನ್ನು ಪೂರ್ತಿ ಕೆಲಸಕ್ಕೆ ನಿಯೋಜಿಸಿಲ್ಲ.