
Israel-Syria War: ಇಸ್ರೇಲ್ ರಕ್ಷಣಾ ಪಡೆಗಳು (IDF) ಡಮಾಸ್ಕಸ್ನ ಹೃದಯಭಾಗದಲ್ಲಿರುವ ಪ್ರಮುಖ ಸಿರಿಯನ್ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸರಣಿ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದೆ. ಅದರಂತೆ, ಇಸ್ರೇಲ್ ಸೇನೆಯು ಸಿರಿಯಾದ ಅಧ್ಯಕ್ಷರ ಭವನ ಹಾಗೂ ಸೇನಾ ಕಛೇರಿಯ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಇಸ್ರೇಲ್ ಸೇನಾ ದಾಳಿಯಿಂದ ಇಸ್ರೇಲ್ ಮತ್ತು ಸಿರಿಯಾ ನಡುವಿನ ಉದ್ವಿಗ್ನತೆಯು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಡಮಾಸ್ಕಸ್ (ಸಿರಿಯಾ): ಇಸ್ರೇಲ್ ರಕ್ಷಣಾ ಪಡೆಗಳು (Israel Defense Forces) ಡಮಾಸ್ಕಸ್ನ ಹೃದಯಭಾಗದಲ್ಲಿರುವ ಪ್ರಮುಖ ಸಿರಿಯನ್ ಸೇನಾ (Syrian Army) ನೆಲೆಗಳನ್ನು ಗುರಿಯಾಗಿಸಿಕೊಂಡು ಸರಣಿ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದೆ. ಅದರಂತೆ, ಇಸ್ರೇಲ್ ಸೇನೆಯು ಸಿರಿಯಾದ ಅಧ್ಯಕ್ಷರ ಭವನ ಹಾಗೂ ಸೇನಾ ಕಛೇರಿಯ ಮೇಲೆ ದಾಳಿ ಮಾಡಿದೆ ಎಂದು ವರದಿಯಾಗಿದೆ. ಏತನ್ಮಧ್ಯೆ, ಇಸ್ರೇಲ್ (Israel) ಸೇನಾ ದಾಳಿಯಿಂದ ಇಸ್ರೇಲ್ ಮತ್ತು ಸಿರಿಯಾ (Syria) ನಡುವಿನ ಉದ್ವಿಗ್ನತೆಯು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ವರ್ಷಗಳ ಕಾಲ ನಡೆದ ಅಂತರ್ಯುದ್ಧದ ನಂತರ ಸಿರಿಯಾದಲ್ಲಿ ರಾಜಕೀಯ ಸ್ಥಿರತೆಯ ಭರವಸೆಗಳು ಮೂಡುತ್ತಿದ್ದ ಸಮಯದಲ್ಲಿ, ಡ್ರೂಜ್ ಅಲ್ಪಸಂಖ್ಯಾತರು ಮತ್ತು ಸರ್ಕಾರಿ ಪಡೆಗಳ ನಡುವಿನ ಹೊಸ ಘರ್ಷಣೆಗಳಿಂದಾಗಿ ಪರಿಸ್ಥಿತಿ ಮತ್ತೆ ಹದಗೆಟ್ಟಿದೆ. ಏತನ್ಮಧ್ಯೆ, ಸಿರಿಯಾದ ಗೋಲನ್ ಹೈಟ್ಸ್ನಲ್ಲಿ ವಾಸಿಸುವ ಡ್ರೂಜ್ ಸಮುದಾಯವನ್ನು ರಕ್ಷಿಸಲು ಇಸ್ರೇಲ್ ಸಿರಿಯಾ ಮೇಲೆ ದಾಳಿ ಮಾಡಿದೆ. ಇದರಿಂದ ಇಸ್ರೇಲ್ ಒಂದೆಡೆ ಹಮಾಸ್, ಮತ್ತೊಂದೆಡೆ ಹೌತಿ, ಇತ್ತೀಚೆಗಷ್ಟೇ ಇರಾನ್ ಮೇಲೆ ರಣರಂಗದಲ್ಲಿ ಕಾಳಗದಲ್ಲಿ ಮುಳುಗಿತ್ತು.
ವೈಮಾನಿಕ ದಾಳಿಯಲ್ಲಿ 18 ಜನರಿಗೆ ಗಾಯ…
ಹಾಗಾಗಿ, ಇಂದು ಸಿರಿಯನ್ ಆಡಳಿತದ ಸೇನಾ ಪ್ರಧಾನ ಕಚೇರಿಯ ಪ್ರವೇಶದ್ವಾರವು ಪ್ರಮುಖ ಗುರಿಗಳಲ್ಲಿ ಒಂದಾಗಿದೆ ಎಂದು ಐಡಿಎಫ್ ಈಗ ದೃಢಪಡಿಸಿದೆ. ಇಸ್ರೇಲ್ ಅಧ್ಯಕ್ಷೀಯ ಭವನದ ಬಳಿಯೂ ವೈಮಾನಿಕ ದಾಳಿ ನಡೆಸಿತು. ಇದರೊಂದಿಗೆ, ಸಿರಿಯನ್ ರಾಜಧಾನಿಯಿಂದ ಹೊರಬರುತ್ತಿರುವ ವಿವಿಧ ವೀಡಿಯೊಗಳ ಪ್ರಕಾರ, ದಾಳಿಗಳು ರಕ್ಷಣಾ ಸಚಿವಾಲಯ ಮತ್ತು ಜನರಲ್ ಸ್ಟಾಫ್ ಕಮಾಂಡ್ ಕಟ್ಟಡವನ್ನು ನಾಶಪಡಿಸಿವೆ.