Hindenburg: Gautam Adani ಗೆ ಬಿಗ್ ರಿಲೀಫ್, SEBI ಕ್ಲೀನ್ ಚಿಟ್! ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕ ಮೂಲದ ಶಾರ್ಟ್-ಸೆಲ್ಲಿಂಗ್ ಕಂಪನಿ ಹಿಂಡೆನ್ಬರ್ಗ್ (Hindenburg) ಆರೋಪಗಳಿಗೆ ಸಂಬಂಧಿಸಿದಂತೆ ಖ್ಯಾತ ಉಧ್ಯಮಿ ಗೌತಮ್ ಅದಾನಿ (Goutam Adani) ಸಂಸ್ಥೆಗಳಿಗೆ ಸೆಬಿ (SEBI) ಕ್ಲೀನ್ ಚಿಟ್ ನೀಡಿದೆ.
ಹೌದು.. ಹಿಂಡನ್ ಬರ್ಗ್ ಆರೋಪಗಳಿಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್ಗೆ ಸೆಬಿ ಕ್ಲೀನ್ ಚಿಟ್ ನೀಡಿದ್ದು, ‘ಹಿಂಡೆನ್ಬರ್ಗ್ನ ಆರೋಪಗಳಲ್ಲಿ ಅರ್ಹತೆ ಇಲ್ಲ, ಪುರಾವೆಗಳ ಕೊರತೆ ಇದೆ ಎಂದು ಹೇಳಿದೆ.
ಗೌತಮ್ ಅದಾನಿ ಸಮೂಹ ಸಂಸ್ಥೆಗಳ ವಿರುದ್ಧ ಹಿಂಡೆನ್ಬರ್ಗ್ ಹೊರಿಸಲಾದ ಎಲ್ಲಾ ಆರೋಪಗಳು ಆಧಾರರಹಿತವೆಂದು ಮಾರುಕಟ್ಟೆ ನಿಯಂತ್ರಕ ಸೆಬಿ ಕಂಡುಕೊಂಡಿದೆ.
ಈ ಹಿಂದೆ ಹಿಂಡೆನ್ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಷೇರುಗಳನ್ನು ಬದಲಾಯಿಸಿದೆ ಎಂದು ಆರೋಪಿಸಿತ್ತು. ಆದರೆ ಸೆಬಿ ಕಂಪನಿಯ ವಿರುದ್ಧ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಿಂಡೆನ್ಬರ್ಗ್ ಪ್ರಕರಣದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ.
ಹಿಂಡನ್ ಬರ್ಗ್ ಆರೋಪಗಳೇನು?
ಅದಾನಿ ಗ್ರೂಪ್ ಜನವರಿ 2023 ರಲ್ಲಿ ಅಡಿಕಾರ್ಪ್ ಎಂಟರ್ಪ್ರೈಸಸ್, ಮೈಲ್ಸ್ಟೋನ್ ಟ್ರೇಡ್ಲಿಂಕ್ಸ್ ಮತ್ತು ರೆಹ್ವರ್ ಇನ್ಫ್ರಾಸ್ಟ್ರಕ್ಚರ್ ಎಂಬ ಮೂರು ಕಂಪನಿಗಳನ್ನು ಅದಾನಿ ಗ್ರೂಪ್ ಕಂಪನಿಗಳ ನಡುವೆ ಹಣವನ್ನು ವರ್ಗಾಯಿಸಲು ಮಾರ್ಗಗಳಾಗಿ ಬಳಸಿಕೊಂಡಿದೆ ಎಂದು ಹಿಂಡೆನ್ಬರ್ಗ್ ಆರೋಪಿಸಿತ್ತು.
ಇದು ಅದಾನಿ ಸಂಬಂಧಿತ-ಪಕ್ಷ ವಹಿವಾಟು ನಿಯಮಗಳನ್ನು ತಪ್ಪಿಸಲು ಮತ್ತು ಹೂಡಿಕೆದಾರರನ್ನು ದಾರಿ ತಪ್ಪಿಸಲು ಸಹಾಯ ಮಾಡಿದೆ ಎಂದು ಆರೋಪಿಸಿತ್ತು. ಆದಾಗ್ಯೂ ಅದಾನಿ ಗ್ರೂಪ್ ಹಿಂಡೆನ್ಬರ್ಗ್ನ ಆರೋಪಗಳನ್ನು ನಿರಂತರವಾಗಿ ನಿರಾಕರಿಸಿದೆ.