Greater ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ? Greater ಬೆಂಗಳೂರು ಅಥಾರಿಟಿ (Greater Bengaluru Authority) ಹೆಸರು ಬದಲಾವಣೆಗೆ ಸರ್ಕಾರದ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಬಿಬಿಎಂಪಿಯನ್ನು (BBMP) Greater ಬೆಂಗಳೂರು ಅಥಾರಿಟಿ ಆಗಿಸಿ 5 ಪಾಲಿಕೆಯಾಗಿ ಮಾಡಲಾಗಿದೆ.
Greater ಬೆಂಗಳೂರು ಅಥಾರಿಟಿಯಲ್ಲಿ ಕನ್ನಡ ಪದಕ್ಕೆ ಒತ್ತು ನೀಡಿ Greater ಎಂಬ ಪದ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ಅಥಾರಿಟಿ ಉಳಿಸಿಕೊಂಡು ಗ್ರೇಟರ್ ಬದಲಾವಣೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ.
Greater ಬದಲಿಗೆ ಕನ್ನಡದ ಸೂಕ್ತ ಪದ ಬಳಕೆಗೆ ಬರುವಂತೆ ಹೆಸರು ಸೂಚಿಸಲು ಅಧಿಕಾರಿಗಳಿಗೆ ಮೌಕಿಕ ಸೂಚನೆ ನೀಡಲಾಗಿದೆ.
ಗ್ರೇಟರ್ ಪದ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಈ ಪದಕ್ಕೆ ಪರ್ಯಾಯವಾಗಿ ಬೇರೆ ಯಾವುದೇ ಪದ ಸಿಕ್ಕಿಲ್ಲವೇ ಎಂದು ಜನರು ಪ್ರಶ್ನಿಸಿದ್ದರು.