
ಕರ್ನಾಟಕದ 5 ವಿದ್ಯುತ್ ಸರಬರಾಜು ಕಂಪನಿಗಳ (HESCOM) ಆನ್ಲೈನ್ ಸೇವೆಗಳು ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ಉನ್ನತೀಕರಣದ ಕಾರಣದಿಂದ ಎರಡು ದಿನಗಳ ಕಾಲ ಸ್ಥಗಿತಗೊಳ್ಳಲಿವೆ.
ಬೆಂಗಳೂರು, ಜುಲೈ 22, 2025: ಕರ್ನಾಟಕದ 5 ವಿದ್ಯುತ್ ಸರಬರಾಜು ಕಂಪನಿಗಳ (ESCOM) ಆನ್ಲೈನ್ ಸೇವೆಗಳು ಮಾಹಿತಿ ತಂತ್ರಜ್ಞಾನ (IT) ವ್ಯವಸ್ಥೆಯ ಉನ್ನತೀಕರಣದ ಕಾರಣದಿಂದ ಎರಡು ದಿನಗಳ ಕಾಲ ಸ್ಥಗಿತಗೊಳ್ಳಲಿವೆ. ಈ ಅವಧಿಯಲ್ಲಿ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸ ಸಂಪರ್ಕ ಸೇವೆಗಳು ಸೇರಿದಂತೆ ಎಲ್ಲಾ ಆನ್ಲೈನ್ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ ಎಂದು ಇಂಧನ ಇಲಾಖೆ ತಿಳಿಸಿದೆ.
ಎಷ್ಟು ದಿನ ಇರಲ್ಲ ಆನ್ಲೈನ್ ಸೇವೆ?
ಈ ಆನ್ಲೈನ್ ಸೇವೆಗಳ ಸ್ಥಗಿತವು ಜುಲೈ 25, 2025ರ ರಾತ್ರಿ 8:30 ಗಂಟೆಯಿಂದ ಜುಲೈ 27, 2025ರ ರಾತ್ರಿ 10:00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಎರಡು ದಿನಗಳ ಅವಧಿಯಲ್ಲಿ ಗ್ರಾಹಕರು ಆನ್ಲೈನ್ ಮೂಲಕ ಯಾವುದೇ ವಿದ್ಯುತ್ ಸಂಬಂಧಿತ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ಥಗಿತಗೊಳ್ಳುವ ಪ್ರದೇಶಗಳು
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯಲ್ಲಿ ಈ ಕೆಳಗಿನ ಉಪ ವಿಭಾಗಗಳಲ್ಲಿ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ:
ಬೆಂಗಳೂರು ನಗರ ವ್ಯಾಪ್ತಿಯ ಎಲ್ಲಾ ಉಪ ವಿಭಾಗಗಳು, ಶಿಢ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ-2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಸಿರಾ, ಚೆನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಗೌರಿಬಿದನೂರು, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್ , ಹರಪ್ಪನಹಳ್ಳಿ, ಹರಿಹರ, ಹಿರಿಯೂರು ಮತ್ತು ತಿಪಟೂರು ನಗರ ಉಪ ವಿಭಾಗಗಳ ವ್ಯಾಪ್ತಿಗಳಲ್ಲಿ ಆನ್ ಲೈನ್ ಸೇವೆ ಬಂದ್ ಇರುವುದಾಗಿ ಎನ್ನಲಾಗಿದೆ.