Dharmasthala: ಕಾಂಗ್ರೆಸ್ನಿಂದಲೂ ‘ಧರ್ಮಸ್ಥಳ ಚಲೋ’! ಅಧಿವೇಶನದ ಬಳಿಕ ನೆಲಮಂಗಲ ಕೈ ಶಾಸಕರಿಂದ ಯಾತ್ರೆ!
ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಬಿಜೆಪಿ ನಾಯಕರು ಧರ್ಮಸ್ಥಳದೊಂದಿಗೆ ನಾವು ಅಭಿಯಾನ ಆರಂಭಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ನ ಓರ್ವ ಶಾಸಕರು ಕೂಡ ಧರ್ಮಸ್ಥಳ ಚಲೋ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದ ವಿರುದ್ಧ ಅಪಕೀರ್ತಿ ತರುವ ಹುನ್ನಾರ
ಧರ್ಮಸ್ಥಳ ಮತ್ತು ಅಲ್ಲಿನ ಧರ್ಮಧಿಕಾರಿಗಳಿಗೆ ಅಪಕೀರ್ತಿ ತರುವ ಹುನ್ನಾರ ಆಗ್ತಿದೆ ಹಾಗಾಗಿ ಧರ್ಮಸ್ಥಳ ಚಲೋ ಮಾಡುವುದಾಗಿ ನೆಲಮಂಗಲದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದ ಮೇಲಿನ ಅಪಪ್ರಚಾರ ವಿರೋಧಿಸಿ ಧರ್ಮಸ್ಥಳ ಪರವಾಗಿ ರ್ಯಾಲಿ ಹೋಗ್ತೇವೆ. ಅಧಿವೇಶನ ಮುಗಿದ ಬಳಿಕ ಯಾತ್ರೆ ಕೈಗೊಳ್ಳುತ್ತೇವೆ ಎಂದರು.
ಬಹುಶ ಶನಿವಾರ ಕಾರುಗಳಲ್ಲಿ ಯಾತ್ರೆ ಕೈಗೊಳ್ಳುತ್ತೇವೆ , ಧರ್ಮಸ್ಥಳದ ಪರವಾಗಿ ನಾವು ಇದ್ದೇವೆ. ನೆಲಮಂಗಲ ವಿಧಾನಸಭಾ ಕ್ಷೇತ್ರದ ಜನರ ಪರವಾಗಿ ನಾವು ಮತ್ತು ನಮ್ಮ ಮುಖಂಡರು ತೆರಳುತ್ತೇವೆ.
ಧರ್ಮಸ್ಥಳಕ್ಕೆ ಬರುವವರು ನೋಂದಣಿ ಮಾಡಿಕೊಂಡು ಬರಬಹುದು. ಕಾರಿನ ಮೂಲಕ ತೆರಳುತ್ತೇವೆ. ಸೌಜನ್ಯ ಹೆಸರು ಬಳಸಿ ಧರ್ಮಸ್ಥಳಕ್ಕೆ ಅಪಕೀರ್ತಿ ತಂದಿದ್ದಾರೆ.
ಸೌಜನ್ಯಗೆ ನ್ಯಾಯ ಸಿಗಬೇಕು ಆದರೆ ಈ ಅಪಪ್ರಚಾರ ನಿಲ್ಲಬೇಕು ಎಂದು ಎಂದು ಹೇಳಿದರು.