Big Boss ಖ್ಯಾತಿಯ ಲಾಯರ್ ಜಗದೀಶ್ಗೆ ಜಾಮೀನು ಮಂಜೂರು! ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಲಾಯರ್ ಜಗದೀಶ್ರನ್ನ ಕೊಡಿಗೆಹಳ್ಳಿ ಪೊಲೀಸರು ನಿನ್ನೆ ಬಂಧಿಸಿದ್ರು.
ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಅನ್ವಯ ಲಾಯರ್ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಇಂದು ವಕೀಲ ಜಗದೀಶ್ಗೆ 7ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 8,000 ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಸಹ ಕೋರ್ಟ್ ಸೂಚಿಸಿದೆ.
ಈ ಬೆನ್ನಲ್ಲೇ ಲಾಯರ್ ಜಗದೀಶ್ ವಿರುದ್ಧ ಮತ್ತೊಂದು ಕೇಸ್ ಸಹ ದಾಖಲಾಗಿದೆ.
ಜಗದೀಶ್ ಮಾಡಿದ್ದ ಮಾರ್ವಾಡಿ ಗೋ ಬ್ಯಾಕ್ ಎಂದು ಬರೆದ ಪೋಸ್ಟ್ ವೈರಲ್ ಆಗಿತ್ತು. ತೆಲಂಗಾಣದಲ್ಲಿ ಮಾರ್ವಾಡಿ ಗೋ ಬ್ಯಾಕ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಅಭಿಯಾನ ನಡೆಸುವಂತೆ ಪೋಸ್ಟ್ ಮಾಡಿದ್ದರು.
ಈ ಹಿನ್ನೆಲೆ ಶಾಂತಿ ಕದಡುವ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಗದೀಶ್ ಸೇರಿದಂತೆ ಇತರರ ವಿರುದ್ಧ ಕೇಸ್ ದಾಖಲಾಗಿದೆ.