BBMP; ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ “ಐತಿಹಾಸಿಕ ನಿರ್ಧಾರ” ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತಿಹಾಸದ ಪುಟ ಸೇರಿದೆ.
ಬೆಂಗಳೂರು ಪಾಲಿಕೆಯನ್ನು 5 ಮಹಾನಗರ ಪಾಲಿಕೆವುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಇಂದಿನಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.
ಒಂದೊಂದು ಪಾಲಿಕೆಗೆ 100ರಿಂದ 150 ವಾರ್ಡ್ಗಳನ್ನು ಸೇರಿಸಲಾಗುತ್ತದೆ. ಅಂದಾಜು 500 ಸದಸ್ಯರು ಆರಿಸಿ ಬರಲಿದ್ದಾರೆ. ನವೆಂಬರ್ 1ರೊಳಗೆ ವಾರ್ಡ್ ವಿಂಗಡಣೆ ಅಂತಿಮವಾಗಲಿದೆ.
ನ.30ರೊಳಗೆ ವಾರ್ಡ್ ಮೀಸಲಾತಿ ಅಂತಿಮವಾಗಲಿದ್ದು, ಆ ನಂತರ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ವರ್ಷಾರಂಭದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಮೇಯರ್ ಅವಧಿ 1 ವರ್ಷದಿಂದ ಎರಡೂವರೆ ವರ್ಷಕ್ಕೆ ವಿಸ್ತರಿಸಲಾಗುವುದು. ನಾಳೆಯಿಂದಲೇ ಆಯಾ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಟ್ಯಾಕ್ಸ್ ಸಂಗ್ರಹಿಸಲಾಗುವುದು.
ನ.1ನೇ ತಾರೀಖಿಗೆ ಎಲ್ಲಾ 5 ಪಾಲಿಕೆಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಬೆಂಗಳೂರು ಉಸ್ತುವಾರಿ ಸಚಿವ ಶಿವಕುಮಾರ್ (DK Shivakumar) ಹೇಳಿದರು.
ಸಿದ್ದರಾಮಯ್ಯ (Siddaramaiah) ಪುತ್ರ ಯತೀಂದ್ರರನ್ನು ಜಿಬಿಎ ಸದಸ್ಯರನ್ನಾಗಿ ಮಾಡಿರೋದನ್ನು ಸಮರ್ಥಿಸಿಕೊಂಡಿರುವ ಡಿಕೆಶಿ ಬೆಂಗಳೂರು ವೋಟರ್ ಆಗಿರುವುದರಿಂದ ಸದಸ್ಯರಾಗಿ ನೇಮಿಸಿರಬಹುದು ಎಂದಿದ್ದಾರೆ.