IND vs ENG: ರೋಚಕ ಘಟ್ಟದಲ್ಲಿ 5ನೇ ಟೆಸ್ಟ್! ಕೆನ್ನಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ (India vs England) ತಂಡ ಗೆಲುವಿನ ಸನಿಹ ಬಂದು ನಿಂತಿದೆ.
374 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಮಳೆಯ ಕಾರಣ ಪಂದ್ಯ ಸ್ಥಗಿತಗೊಳ್ಳುವ ಮುನ್ನ 6 ವಿಕೆಟ್ ಕಳೆದುಕೊಂಡು 339 ರನ್ಗಳಿಸಿದೆ.
ಕೊನೆಯ ದಿನ ಇಂಗ್ಲೆಂಡ್ ತಂಡ ಗೆಲ್ಲಲು ಇನ್ನು35 ರನ್ಗಳಿಸಿದರೆ, ಇತ್ತ ಭಾರತ ತಂಡ ಕೊನೆಯ 3 ವಿಕೆಟ್ ಪಡೆದರೆ ಗೆಲುವು ಸಾಧಿಸಲಿದೆ.
ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಶತಕ ಸಿಡಿಸಿ ಅಸಾಧ್ಯ ಗುರಿಯನ್ನ ಬೆನ್ನಟ್ಟಲು ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಜೇಮಿ ಸ್ಮಿತ್ ಅಜೇಯ 2 ಹಾಗೂ ಜೇಮಿ ಓವರ್ಟನ್ ಇನ್ನು ಖಾತೆ ತೆರೆಯದೇ ಮೈದಾನದಲ್ಲಿದ್ದಾರೆ.
ಭಾರತಕ್ಕೆ ಆರಂಭಿಕ ಯಶಸ್ಸು:
374 ರನ್ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 3ನೇ ದಿನ 50ಕ್ಕೆ1 ವಿಕೆಟ್ ಕಳೆದುಕೊಂಡಿತ್ತು. 4ನೇ ದಿನ ಚೇಸಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡ ಬಹುಬೇಗನೇ ಬೆನ್ ಡಕೆಟ್ ವಿಕೆಟ್ ಕಳೆದುಕೊಂಡಿತು.
ಪ್ರಸಿಧ್ ಕೃಷ್ಣ ಬೌಲಿಂಗ್ನಲ್ಲಿ 83 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 54 ರನ್ಗಳಿಸಿದ್ದ ಡಕೆಟ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಾಯಕ ಒಲಿ ಪೋಪ್ 27 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತದ ಆಸೆಗೆ ಭಂಗ ತಂದ ರೂಟ್-ಬ್ರೂಕ್
ಭಾರತ ಆರಂಭಿಕವಾಗಿ ವಿಕೆಟ್ ಪಡೆದು ಗೆಲುವು ಪಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಇಬ್ಬರು 195 ರನ್ಗಳ ಜೊತೆಯಾಟ ನೀಡಿ ಭಾರತದ ಗೆಲುವಿನ ಆಸೆಗೆ ತಡೆಯಾದರು.
ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದ ಬ್ರೂಕ್ 98 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್ಗಳ ಸಹಿತ 111 ರನ್ಗಳಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. 19 ರನ್ ಆಗಿದ್ದ ವೇಳೆ ಸಿರಾಜ್ ಬ್ರೂಕ್ ನೀಡಿದ್ದ ಕ್ಯಾಚ್ ಹಿಡಿದು ಬೌಂಡರಿ ಗೆರೆ ತುಳಿದರು.
ಆ ಅವಕಾಶ ಪಡೆದ ಬ್ರೂಕ್ ಭಾರತೀಯ ಬೌಲರ್ಗಳನ್ನ ಬೆಂಡೆತ್ತಿದ್ದರು.