ಧರ್ಮಸ್ಥಳದಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ ಬಯಲು! ತಲೆ ಬುರುಡೆ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ದೂರು ನೀಡಿದ್ದ ಅನಾಮಿಕ ವ್ಯಕ್ತಿ 13 ಸ್ಥಳಗಳನ್ನು ಗುರುತಿಸಿದ್ದ.
ಆದರೆ 1, 2, 3, 4 ಹಾಗೂ 5ನೇ ಸ್ಥಳದಲ್ಲೂ ಅಸ್ಥಿಪಂಜರ ಸಿಕ್ಕಿರಲಿಲ್ಲ. ಆದರೆ 6ನೇ ಸ್ಥಳದಲ್ಲಿ ಮಾನವ ಮೂಳೆ ಸಿಕ್ಕಿದ್ದು, ಸದ್ಯ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಈ ನಡುವೆ ಮೊದಲನೇ ಸ್ಥಳದಲ್ಲಿ ಒಂದು ಎಟಿಎಂ ಕಾರ್ಡ್ ಹಾಗೂ ಪಾನ್ ಕಾರ್ಡ್ ಸಿಕ್ಕಿತ್ತು. ಇದರ ಬೆನ್ನು ಬಿದ್ದಿದ್ದ ಎಸ್ಐಟಿ ಟೀಂ, ಅದು ಯಾರದ್ದು ಅಂತ ಪತ್ತೆ ಹಚ್ಚಿತ್ತು.
ಇದೀಗ ಎಟಿಎಂ ಕಾರ್ಡ್ ಯಾರದ್ದು ಅಂತ ಹುಡುಕಾಟ ನಡೆಸಿದ ಎಸ್ಐಟಿ ಟೀಂಗೆ ಸ್ಫೋಟಕ ಮಾಹಿತಿ ಸಿಕ್ಕಿದೆ.
ಪಾನ್ ಕಾರ್ಡ್ನ ಮಾಲೀಕ ಈಗಾಗಲೇ ಸಾವು
ಅನಾಮಿಕ ಗುರುತಿಸಿದ್ದ ಮೊದಲನೇ ಸ್ಥಳದಲ್ಲಿ ಪಾನ್ ಕಾರ್ಡ್ ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿತ್ತು. ಪಾನ್ ಕಾರ್ಡ್ ಬೆನ್ನು ಬಿದ್ದ ಎಸ್ಐಟಿ ಟೀಂ, ಅದು ಯಾರಿಗೆ ಸೇರಿದ್ದು ಅಂತ ಪತ್ತೆ ಹಚ್ಚಿತ್ತು.
ಈ ಪ್ಯಾನ್ ಕಾರ್ಡ್ ಹೋಲ್ಡರ್ 2025ರಲ್ಲಿ ಮೃತಪಟ್ಟಿದ್ದರು. ಮಾರ್ಚ್ 2025ರಲ್ಲಿ ಜಾಂಡೀಸ್ನಿಂದ ವ್ಯಕ್ತಿ ಮೃತಪಟ್ಟಿರುವುದಾಗಿ ಮಾಹಿತಿ ತಿಳಿದು ಬಂದಿತ್ತು.
ಮೃತಪಟ್ಟ ವ್ಯಕ್ತಿಯ ತಂದೆಯನ್ನು ಎಸ್ಐ ಸಂರ್ಪಕಿಸಿದ್ದಾರೆ ಅನ್ನೋ ಮಾಹಿತಿ ದೊರೆತಿದೆ. ಈ ವೇಳೆ ಆತ ಸಾವನ್ನಪ್ಪಿರೋ ಮಾಹಿತಿ ಲಭ್ಯವಾಗಿದೆ
ಗುಂಡಿಯಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ಇವರದ್ದೇ!
ಇದರ ಜೊತೆ ಡೆಬಿಟ್ ಕಾರ್ಡ್ ಕೂಡ ಸಿಕ್ಕಿತ್ತು. ಇಂದು ಅದರ ಬೆನ್ನು ಬಿದ್ದ ಎಸ್ಐಟಿ ಟೀಂ, ಆ ಕಾರ್ಡ್ ಯಾರದ್ದು ಅನ್ನೋದನ್ನು ಕಂಡು ಹಿಡಿದಿದೆ.
ಅಂದಹಾಗೆ ಈ ಡೆಬಿಟ್ ಕಾರ್ಡ್ ಓನರ್ ಮಹಿಳೆಯಾಗಿದ್ದು, ಆಕೆ ಇನ್ನೂ ಜೀವಂತವಾಗಿದ್ದಾರೆ ಎನ್ನಲಾಗಿದೆ.
ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆ ಇನ್ನೂ ಜೀವಂತ
ಡೆಬಿಟ್ ಕಾರ್ಡ್ ವಾರಸುದಾರ ಮಹಿಳೆ ಇನ್ನೂ ಜೀವಂತವಾಗಿದ್ದು, ಪಾಯಿಂಟ್ ನಂಬರ್ ಒನ್ನಲ್ಲಿ ಪತ್ತೆಯಾಗಿದ್ದ ಡೆಬಿಟ್ ಹಾಗೂ ಪಾನ್ ಕಾರ್ಡ್ ಎರಡೂ ಒಂದೇ ಮನೆಯವ್ರಿಗೆ ಸೇರಿದ್ದಾಗಿದೆ.
ಈಗಾಗಲೇ ಅನಾರೋಗ್ಯದಿಂದ ಪಾನ್ ಕಾರ್ಡ್ ವಾರಸುದಾರ ಸಾವನ್ನಪ್ಪಿದ್ದು, ಡೆಬಿಟ್ ಕಾರ್ಡ್ ಕೂಡ ಸಾವಿಗೀಡಾದ ವ್ಯಕ್ತಿಯ ತಾಯಿಗೆ ಸೇರಿದ್ದು ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲಾ ಊಹಾಪೋಹಕ್ಕೂ ತೆರೆ ಎಳೆದ ಎಸ್ಐಟಿ
ಇನ್ನೂ ಜೀವಂತವಾಗಿರುವ ಡೆಬಿಟ್ ಕಾರ್ಡ್ ವಾರಿಸುದಾರ ಮಹಿಳೆಯನ್ನು ಎಸ್ಐಟಿ ಟೀಂ ಸಂಪರ್ಕಿಸಿದೆ.
ಮಹಿಳೆ ಇನ್ನೂ ಜೀವಂತ ಎಂದು ಮಾಹಿತಿ ಇದ್ದು, ಡೆಬಿಟ್ ಕಾರ್ಡ್ ಬಳಕೆದಾರರ ಮಾಹಿತಿಯನ್ನು ಎಸ್ಐಟಿ ಖಚಿತ ಪಡಿಸಿದೆ.
ಸದ್ಯ ಇದೇ ಡೆಬಿಟ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಕುರಿತು ಅನೇಕ ಊಹಾ ಪೋಹ ಸೃಷ್ಟಿಯಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೆ ಎಸ್ಐಟಿ ತೆರೆ ಎಳೆದಿದೆ.