‘ಸು ಫ್ರಮ್ ಸೋ’ ಚಿತ್ರವನ್ನ ರಿಷಬ್ ಶೆಟ್ರು ನೋಡಿದ್ದಾರೆ. ಮನಸಾರೆ ಈ ಚಿತ್ರವನ್ನ ಹೊಗಳಿದ್ದಾರೆ. ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಅವರನ್ನ ಕನ್ನಡ ಚಿತ್ರರಂಗಕ್ಕೂ ಸ್ವಾಗತಿಸಿದ್ದಾರೆ. ನಿರ್ಮಾಪಕ ರಾಜ್ ಬಿ ಶೆಟ್ಟಿಗೂ ಅಭಿನಂದನೆ ಹೇಳಿದ್ದಾರೆ.
ಕಾಂತಾರ ಚಿತ್ರದ ಗೆಲುವು ಇಡೀ ತುಳುನಾಡ ಕಲಾವಿದರಿಗೆ ಒಂದು ಸ್ಪೂರ್ತಿ ನೀಡಿದೆ. ಕರಾವಳಿ ಹೊಸ ಡೈರೆಕ್ಟರ್ಗೂ ಒಂದು ಉತ್ಸಾಹ ನೀಡಿದೆ.
ಅದನ್ನ ಸು ಫ್ರಮ್ ಸೋ ಚಿತ್ರದ ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಹೇಳಿಕೊಂಡಿದ್ದರು. ಚಿತ್ರ ರಿಲೀಸ್ ಆದ್ಮೇಲೆ ರಿಷಬ್ ಶೆಟ್ರು ನೋಡಿ ಏನ್ ಹೇಳ್ತಾರೆ ಅನ್ನೋ ಪ್ರಶ್ನೆನೂ ಇತ್ತು.
ಆ ಒಂದು ಪ್ರಶ್ನೆಗೆ ಲೆಟರ್ ಹೆಡ್ ಮೇಲೇನೆ ರಿಷಬ್ ಶೆಟ್ರು ತಮ್ಮ ಅಭಿಪ್ರಾಯ ಬರೆದಿದ್ದಾರೆ. ಅದನ್ನ ತಮ್ಮ ಸ್ಟೇಟಸ್ ಅಲ್ಲೂ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸ್ವಾಗತ
ಡೈರೆಕ್ಟರ್ ಜೆ.ಪಿ.ತುಮ್ಮಿನಾಡ್ ಅವರಿಗೆ ರಿಷಬ್ ಶೆಟ್ರು ಸ್ವಾಗತ ಕೋರಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಸ್ವಾಗತ ಅಂತಲೇ ಹೇಳಿದ್ದಾರೆ.
ಸಿನಿಮಾದಲ್ಲಿ ನಟಿಸಿರೋ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರೆಲ್ಲರ ನಟನೆಯ ಈ ಚಿತ್ರ ನೋಡಿತ್ತಾ ಹೋದಂತೆ ಖುಷಿನೂ ಆಗಿದೆ.
ರಾಜ್ ಬಿ ಶೆಟ್ರಿಗೆ ಶುಭಾಶಯಗಳು
ಸು ಫ್ರಮ್ ಸೋ ಚಿತ್ರವನ್ನ ನಿರ್ಮಿಸಿದ ರಾಜ್ ಬಿ ಶೆಟ್ಟಿ, ಶಶಿಧರ್ ಶೆಟ್ಟಿ ಬಾರೋಡ್, ರವಿ ರೈ ಅವರಿಗೂ ಶುಭಾಶಯಗಳು ತಿಳಿಸುತ್ತೇನೆ. ಇವರು ಸಪೋರ್ಟ್ ಮಾಡಿರೋದಕ್ಕೇನೆ ಸು ಫ್ರಮ್ ಸೋ ದಂತಹ ಚಿತ್ರ ನಿರ್ಮಾಣ ಆಗಿದೆ.
ಒಳ್ಳೆ ಮನರಂಜನಾತ್ಮಕ ಸಿನಿಮಾ
ಸು ಫ್ರಮ್ ಸೋ ಚಿತ್ರ ಒಳ್ಳೆ ಚಿತ್ರವೇ ಆಗಿದೆ. ಮನರಂಜನೆ ಕೊಡುತ್ತಿದೆ. ಈ ಚಿತ್ರ ನೋಡಿ ತುಂಬಾನೆ ಖುಷಿ ಆಗಿದೆ. ಇಂತಹ ಚಿತ್ರ ಕೊಟ್ಟ ಸಿನಿಮಾ ತಂಡಕ್ಕೆ ಒಳ್ಳೆಯದಾಗಲಿ.
ಈ ಚಿತ್ರಕ್ಕೆ ಇನ್ನು ದೊಡ್ಡ ಯಶಸ್ಸು ಸಿಗಲಿ. ಕನ್ನಡ ಚಿತ್ರರಂಗಕ್ಕೆ ನಿಮ್ಮ ಬೆಂಬಲ ಹೀಗೆ ಇರಲಿ ಅಂತಲೇ ರಿಷಬ್ ಶೆಟ್ರು ಬರೆದುಕೊಂಡಿದ್ದಾರೆ ಅಂತಲೇ ಹೇಳಬಹುದು.