ಕೋಡಿಮಠ ಸ್ವಾಮೀಜಿ ಬಳಿ ಭವಿಷ್ಯ ಕೇಳಿದ ಡಿಕೆ ಶಿವಕುಮಾರ್! ಹೊರ ಬರುತ್ತಿದ್ದಂತೆ ಮೊಳಗಿತು ‘ಮುಂದಿನ ಸಿಎಂ ಡಿಕೆಶಿ’ ಘೋಷಣೆ!
ರಾಜ್ಯದಲ್ಲಿ ಸಿಎಂ ಕುರ್ಚಿ ಬಗ್ಗೆ ಊಹಾಪೋಹಗಳು ಭಾರೀ ಚರ್ಚೆಯಾಗುತ್ತಿದೆ. ಸಿಎಂ, ಡಿಸಿಎಂ ದೆಹಲಿ ಪ್ರವಾಸ ಕೂಡ ಕೈಗೊಳ್ಳುತ್ತಿರುವುದು ಗೊಂದಲಕ್ಕೂ ಕಾರಣವಾಗಿದೆ.

ಈ ಮಧ್ಯೆ ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೇವಾಲಯಗಳಿಗೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಇದೀಗ ಡಿಸಿಎಂ ಡಿಕೆ ಶಿವಕುಮಾರ್, ಹಾಸನದ ಪ್ರಸಿದ್ಧ ಜೇನುಕಲ್ ಸಿದ್ದೇಶ್ವರ ದೇವಾಲಯ ಮತ್ತು ಕೋಡಿ ಮಠಕ್ಕೂ ಭೇಟಿ ನೀಡಿದ್ದಾರೆ.
ಹಾಸನದ ಜೇನುಕಲ್ ಸಿದ್ದೇಶ್ವರ ದೇವಾಲಯಕ್ಕೆ ಡಿಕೆ ಶಿವಕುಮಾರ್ ಭೇಟಿ ಕೊಟ್ಟಿದ್ದು,
ಅರಸೀಕೆರೆ ಸಾಧನಾ ಸಮಾವೇಶ ಕಾರ್ಯಕ್ರಮ ಮುಗಿಸಿ ಡಿಕೆಶಿ ದೇವಾಲಯಗಳಿಗೆ ಭೇಟಿಕೊಟ್ಟಿದ್ದಾರೆ. ಸಿದ್ದೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕೋಡಿ ಮಠಕ್ಕೆ ತೆರಳಿದ್ದಾರೆ.
ಸರ್ಕಾರಿ ಕಾರ್ಯಕ್ರಮ ನಿಮಿತ್ತ ಅರಸೀಕೆರೆಗೆ ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ಹೆಲಿಕಾಪ್ಟರ್ನಲ್ಲಿ ಬಂದಿದ್ದ ಡಿಕೆಶಿ, ನಂತರ ಅಲ್ಲಿಂದ ದೇವಾಲಯಗಳಿಗೆ ಭೇಟಿ ನೀಡಿದ್ದು, ಈ ವೇಳೆ ‘ಜೇನುಕಲ್ ಸಿದ್ದೇಶ್ವರನ ದರ್ಶನಕ್ಕೆ ಬಂದಿದ್ದೇನೆ.
ಸಿದ್ದೇಶ್ವರನ ದರ್ಶನ ಮಾಡುವ ಅವಕಾಶ ನನಗೆ ಸಿಕ್ಕಿದೆ. ರಾಜ್ಯಕ್ಕೆ ಒಳ್ಳೆಯದಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿದ್ದೇನೆ ಎಂದು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ‘ವೈಯಕ್ತಿಕವಾಗಿ ಏನಾದ್ರು ಪ್ರಾರ್ಥನೆ ಸಲ್ಲಿಸಿದ್ದೀರಾ ಎಂದು ಕೇಳಿದಾಗ, ಅದು ಭಕ್ತನಿಗೂ ದೇವರಿಗೂ ಬಿಟ್ಟ ವಿಚಾರ‘ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.