Hindu-Muslim: ಹಿಂದೂ ಯುವಕನ ಮತಾಂತರಕ್ಕೆ ಯತ್ನ, ಪ್ರೀತಿಸಿ ಮದುವೆಯಾದ ಮುಸ್ಲಿಂ ಯುವತಿಯಿಂದಲೇ ಟಾರ್ಚರ್!

Hindu-Muslim: ಹಿಂದೂ ಯುವಕನ ಮತಾಂತರಕ್ಕೆ ಯತ್ನ!

ಪ್ರೀತಿಸಿ ಮದುವೆಯಾದ ಮುಸ್ಲಿಂ ಹುಡುಗಿ ಹಾಗೂ ಆಕೆಯ ತಾಯಿ ಇಬ್ಬರೂ ಹಿಂದೂ ಹುಡುಗನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗದಗ: ಪ್ರೀತಿಸಿ ಮದುವೆಯಾದ ಹಿಂದೂ ಹುಡುಗನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾದ ಮುಸ್ಲಿಂ ಹುಡುಗಿ ಹಾಗೂ ಆಕೆಯ ತಾಯಿ ಇಬ್ಬರೂ ಹಿಂದೂ ಹುಡುಗನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗದಗ ನಗರದ ಗಾಂಧಿನಗರ ಸೆಟ್ಲ್ಮೆಂಟ್  ಏರಿಯಾದ ನಿವಾಸಿ ವಿಶಾಲ ಕುಮಾರ್ ಗೋಕಾವಿ ಎಂಬ ಯುವಕನೇ ಮತಾಂತರ ಆರೋಪ ಮಾಡಿದವ. ಈತ ಮುಸ್ಲಿಂ ಯುವತಿ ತಹಸೀನಾ ಎಂಬಾಕೆ ಜೊತೆ ಪ್ರೇಮವಿವಾಹವಾಗಿದ್ದ. ಇದೀಗ ಆಕೆ ಮತ್ತು ಆಕೆ ತಾಯಿ ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದಾರೆ ಅಂತ ವಿಶಾಲ ಕುಮಾರ್ ಆರೋಪಿಸಿದ್ದಾನೆ.

ವಿಶಾಲ್ ಕುಮಾರ್ ಗೋಕಾವಿ ಎಂಬ ಯುವಕ ತಾನು ಪ್ರೀತಿಸಿ ಮದುವೆಯಾಗಿದ್ದ ತಹಸೀನಾ ಎಂಬ ಮುಸ್ಲಿಂ ಯುವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಈ ಜೋಡಿ 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಕಳೆದ 2024ರ ನವೆಂಬರ್‌ 24ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಬಳಿಕ ಮುಸ್ಲಿಂ ಸಂಪ್ರದಾಯದಂತೆ ನಿಖಾ ಮಾಡಿಕೊಳ್ಳುವಂತೆ ಯುವತಿ ಒತ್ತಾಯಿಸಿದ್ದಳಂತೆ.

Leave a Reply

Your email address will not be published. Required fields are marked *