
ಇದೀಗ ಒಂದೇ ದಿನ ಇಬ್ಬರು ಕಿಲ್ಲರ್ ಹಾರ್ಟ್ ಅಟ್ಯಾಕ್ನಿಂದಾಗಿ ಇಬ್ಬರು ಬಲಿಯಾಗಿದ್ದಾರೆ. 26 ವರ್ಷದ ಯುವತಿಯೊಬ್ಬಳು ಮತ್ತು 42 ವರ್ಷದ ದೈಹಿಕ ಶಿಕ್ಷಕ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ದಾವಣಗೆರೆ: ಇತ್ತೀಚೆಗೆ ಹೃದಯಾಘಾತ (Heart Attack) ಹೆಚ್ಚಾಗಿ ಸಂಭವಿಸುತ್ತಿದೆ. ಹಿಂದೆಲ್ಲ ತೂಕ ಹೆಚ್ಚಳದಿಂದ, ರಕ್ತದೊತ್ತಡದಿಂದ ಈ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ ಇತ್ತೀಚೆಗೆ ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಸಮಸ್ಯೆಗಳೇ ಯುವಕರನ್ನು ಕಾಡುತ್ತಿದೆ. ಇದೀಗ ಒಂದೇ ದಿನ ಇಬ್ಬರು ಕಿಲ್ಲರ್ ಹಾರ್ಟ್ ಅಟ್ಯಾಕ್ನಿಂದಾಗಿ ಇಬ್ಬರು ಬಲಿಯಾಗಿದ್ದಾರೆ. 26 ವರ್ಷದ ಯುವತಿಯೊಬ್ಬಳು ಮತ್ತು 42 ವರ್ಷದ ದೈಹಿಕ ಶಿಕ್ಷಕ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಹೃದಯಾಘಾತಕ್ಕೆ ದೈಹಿಕ ಶಿಕ್ಷಕ ಸಾವು
ದಾವಣಗೆರೆ: ದಾವಣಗೆರೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿಯಲ್ಲಿ ಹೃದಯಾಘಾತದಿಂದ ದೈಹಿಕ ಶಿಕ್ಷಕ ಸಾವನ್ನಪ್ಪಿದ್ದು, ಮೃತರನ್ನು ರವಿಕುಮಾರ್ (42) ಎಂದು ಗುರುತಿಸಲಾಗಿದೆ. ಶಾಲಾ ಆವರಣದಲ್ಲೇ ದೈಹಿಕ ಶಿಕ್ಷಕ ರವಿಕುಮಾರ್ ಸಂಜೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
26 ವರ್ಷದ ಯುವತಿಗೆ ಹೃದಯಾಘಾತ
ಕೊಪ್ಪಳ: ಹೃದಯಾಘಾತದಿಂದ 26 ವರ್ಷದ ಯುವತಿ ಸಾವನ್ನಪ್ಪಿದ್ದು, 26 ವರ್ಷದ ಮಂಜುಳಾ ಹೂಗಾರ್ ಎಂದು ಗುರುತಿಸಲಾಗಿದೆ. ಕೊಪ್ಪಳದ ಶಿವಗಂಗಾ ಲೇಔಟ್ ನಿವಾಸಿ ಮಂಜುಳಾ, ಲೋ ಬಿಪಿಯಾಗಿ ಆಸ್ಪತ್ತೆಗೆ ಸಾಗಿಸೋ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆ ಬಳಿಕ ಪರಿಶೀಲಿಸಿದ ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ.