ಒಮ್ಮೊಮ್ಮೆ ಹೆಚ್ಚಿನವರು ಪ್ರೊಟೀನ್ (Protein) ಭರಿತ ಖಾದ್ಯಗಳನ್ನು ಬಯಸುತ್ತಾರೆ. ಪ್ರೊಟೀನ್ ಶೇಕ್ ಕುಡಿದರೂ ಒಮ್ಮೊಮ್ಮೆ ಪ್ರೊಟೀನ್ ಭರಿತ ಆಹಾರಗಳೇ ನಮ್ಮ ಪ್ರೊಟೀನ್ ಅಗತ್ಯತೆಗಳನ್ನು ಪೂರ್ತಿಗೊಳಿಸುತ್ತವೆ.
ಹಾಗಿದ್ದರೆ ಪ್ರೊಟೀನ್ ಕೊರತೆಯನ್ನು ನೀಗಿಸಲು ಇಂದಿನ ಲೇಖನದಲ್ಲಿ ಸ್ವಾದಿಷ್ಟಕರವಾದ ಹೈ-ಪ್ರೊಟೀನ್ ಖಾದ್ಯಗಳನ್ನು ತಿಳಿಸುತ್ತಿದ್ದು ಇದನ್ನು ಬೇಗನೇ ತಯಾರಿಸಬಹುದು.
ಇನ್ನು ಜಿಮ್ಗೆ ಹೋಗುವವರಿಗೂ ಈ ಖಾದ್ಯಗಳು ಸೂಕ್ತವಾಗಿದ್ದು, ಪ್ರೊಟೀನ್ ಭರಿತ ಆಅರಗಳು ಸ್ನಾಯು ನಿರ್ಮಾಣಕ್ಕೆ ಸಹಕಾರಿಯಾಗಲಿದೆ.
ಚನ್ನಾ ಮಸಾಲಾ:
ಚನ್ನಾ ಮಸಾಲಾ ಸಸ್ಯ ಆಧಾರಿತ ಪ್ರೊಟೀನ್ ಆಹಾರ ಎಂದೆನಿಸಿದೆ. USDA ಪ್ರಕಾರ, 100 ಗ್ರಾಂ ಬೇಯಿಸಿದ ಕಡಲೆಯಲ್ಲಿ ಸುಮಾರು 19 ಗ್ರಾಂ ಪ್ರೋಟೀನ್ ಇರುತ್ತದೆ.
ಲಘುವಾದ ರೋಟಿಯೊಂದಿಗೆ ಇಲ್ಲವೇ ಚಾಟ್ ಮಾದರಿಯಲ್ಲೂ ಚನ್ನಾ ಮಸಾಲೆಯನ್ನು ಸೇವಿಸಬಹುದು. ಸ್ನಾಯುಗಳಿಗೂ ಉತ್ತಮವಾಗಿರುವ ಚನ್ನಾ ನಿಮ್ಮ ದೈನಂದಿನ ಪ್ರೊಟೀನ್ ಅಗತ್ಯತೆಯನ್ನು ಪೂರ್ತಿ ಮಾಡುತ್ತದೆ.
ಬೇರೆ ಬೇರೆ ತರಕಾರಿಗಳನ್ನು ಹಾಕಿ ಫೈಬರ್ ಭರಿತವನ್ನಾಗಿಯೂ ಚನ್ನಾ ಮಸಾಲಾವನ್ನು ತಯಾರಿಸಬಹುದಾಗಿದೆ.
ಸೋಯಾ ಖೀಮಾ:
ಇದೊಂದು ಸಸ್ಯಾಹಾರಿ ಸೋಯಾ ಖೀಮಾ ರೆಸಿಪಿ ಎಂದೆನಸಿದ್ದು ನೈಸರ್ಗಿಕವಾಗಿ ಪ್ರೊಟೀನ್ ಸಮೃದ್ಧವಾಗಿದೆ ಹಾಗೂ ಹೊಟ್ಟೆಯನ್ನು ಬೇಗನೇ ತುಂಬಿಸಬಲ್ಲುದು.
ಈರುಳ್ಳಿ, ಟೊಮೆಟೊ ಮತ್ತು ಮಸಾಲಾಗಳೊಂದಿಗೆ ಬೇಯಿಸಿದಾಗ ಈ ಸೋಯಾ ಖೀಮಾ ಒಂದು ಅತ್ಯದ್ಭುತ ಖಾದ್ಯವಾಗಿ ತಯಾರಾಗಿಬಿಡುತ್ತದೆ.