
ಜೀವನದ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಹಣಕಾಸಿನ ಸಹಾಯದ ಟೂಲ್ ಆಗಿದ್ದ ಇಎಂಐ, ಈಗ ಜನರ ಜೀವನ ವಿಧಾನವೇ ಆಗಿಬಿಟ್ಟಿದೆ.
ಪೋನ್ ಖರೀದಿಸಲು ಇಎಂಐ ಅನ್ನು ಜನರು ಬಳಸುತ್ತಿದ್ದಾರೆ. ಫ್ರಿಡ್ಜ್, ಸೋಫಾ, ಎಸಿ, ಪ್ಲೈಟ್ ಟಿಕೆಟ್ ಖರೀದಿಗೂ ಇಎಂಐ ಆಯ್ಕೆಯ ಮೊರೆ ಹೋಗುತ್ತಿದ್ದಾರೆ.
ಮನೆಗೆ ಬೇಕಾದ ದವಸ ಧಾನ್ಯ ಖರೀದಿಗೂ ಇಎಂಐ ಆಯ್ಕೆ ಮಾಡುತ್ತಿದ್ದಾರೆ. ಯಾವುದೇ ಪೇಪರ್ ವರ್ಕ್ ಇಲ್ಲ. ಬರೀ ಕ್ರೆಡಿಟ್ ಕಾರ್ಡ್ನಲ್ಲಿ ಸ್ವೈಪ್ ಮಾಡೋದು ಇಎಂಐ ಆಗಿ ಪರಿವರ್ತಿಸುವುದೇ ಆಗಿದೆ.
ಕ್ರೆಡಿಟ್ ಕಾರ್ಡ್ ಸಾಲ, ಇಎಂಐ ಅನ್ನು ನಾವು ಈಗ ಸಾಮಾನ್ಯದಂತೆ ಬಳಸುತ್ತಿದ್ದೇವೆ. ಅಂಕಿಅಂಶಗಳ ಪ್ರಕಾರ, ಸಮಸ್ಯೆ ತೀವ್ರ ಅಳವಾಗಿದೆ. ಭಾರತದಲ್ಲಿ ಗೃಹ ಬಳಕೆಯ ಸಾಲ ಜಿಡಿಪಿಯ ಶೇ.42ಕ್ಕೆ ಏರಿಕೆಯಾಗಿದೆ.
ಇದರ ಪೈಕಿ ಶೇ.32 ರಷ್ಟು ಭದ್ರತೆ ಇಲ್ಲದ ಸಾಲ ಅಂದರೇ, ಕ್ರೆಡಿಟ್ ಕಾರ್ಡ್, ವೈಯಕ್ತಿಕ ಸಾಲದ ಮೂಲಕ ಪಡೆದಿದ್ದು. ಇನ್ನೂ ಕೆಲವೆಡೆ ಈಗ ಖರೀದಿಸಿ, ನಂತರ ಪಾವತಿಸಿ (ಬೈ ನೌ, ಪೇ ಲ್ಯಾಟರ್ ಸರ್ವೀಸ್) ಪದ್ಧತಿ ಜಾರಿಗೆ ಬಂದಿದೆ.
ಹೇಗಾದರೂ ಮಾಡಿ ಜನರು ಉತ್ಪನ್ನಗಳನ್ನು ಖರೀದಿಸುವಂತೆ ಮಾಡಲು ಈಗ ಖರೀದಿಸಿ, ನಂತರ ಪಾವತಿಸಿ ಸಿಸ್ಟಮ್ ಜಾರಿಗೆ ತಂದಿದ್ದಾರೆ.
ಇನ್ನೂ ಭಾರತದಲ್ಲಿ ಐಪೋನ್ ಖರೀದಿದಾರರ ಪೈಕಿ ಶೇ.70 ರಷ್ಟು ಮಂದಿ ಇಎಂಐ ಮೂಲಕವೇ ಐ ಪೋನ್ ಖರೀದಿಸಿದ್ದಾರೆ.
ಶೇ.11 ರಷ್ಟು ಸಣ್ಣ ಸಾಲಗಾರರು ಈಗಾಗಲೇ ಸಾಲ ಕಟ್ಟದೇ ಸುಸ್ತಿದಾರರೂ ಆಗಿದ್ದಾರೆ. ಐದು ಮಂದಿಯ ಪೈಕಿ ಮೂರು ಮಂದಿ ಮೂರು ಅಥವಾ ಅದಕ್ಕೂ ಹೆಚ್ಚಿನ ಸಾಲವನ್ನು ಏಕ ಕಾಲಕ್ಕೆ ಪಡೆದಿದ್ದಾರೆ.