
ಇಂಗ್ಲೆಂಡ್ ವಿರುದ್ಧ ಭಾರತ 336 ರನ್ಗಳ ಅಂತರದಲ್ಲಿ ಗೆದ್ದಿದೆ. ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸೋಲಿಗೆ ಕಾರಣ ಯಾರು ಎಂಬುದನ್ನು ಬಹಿರಂಗಪಡಿಸಿದರು.
ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದೆ 5 ಪಂದ್ಯಗಳ ಟೆಸ್ಟ್ ಸರಣಿಯ (Test Series) 2ನೇ ಪಂದ್ಯದಲ್ಲಿ 336 ರನ್ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.
ಭಾರತ ನೀಡಿದ್ದ 608 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 271ಕ್ಕೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಆ ಮೂಲಕ ಟೀಂ ಇಂಡಿಯಾ (Team India) ಸರಣಿಯನ್ನು 1-1 ರಿಂದ ಸಮಬಲ ಸಾಧಿಸಿತು.
ಇನ್ನೂ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಸೋಲಿಗೆ ಕಾರಣ ಯಾರು ಎಂಬುದನ್ನು ಬಹಿರಂಗಪಡಿಸಿದರು.
ಎಡ್ಜ್ಬಾಸ್ಟನ್ ಕ್ರಿಕೆಟ್ ಅಂಗಳದಲ್ಲಿ 58 ವರ್ಷಗಳ ಬಳಿಕ ಭಾರತ ಟೆಸ್ಟ್ ಪಂದ್ಯವನ್ನು ಗೆದ್ದಿದೆ.
ಮನ್ಸೂರ್ ಅಲಿ ಖಾನ್ ಪಟೌಡಿ, ಕಪಿಲ್ ದೇವ್, ವೆಂಕಟರಾಘವನ್, ಮೊಹಮ್ಮದ್ ಅಜರುದ್ದೀನ್, ಎಂಎಸ್ ಧೋನಿ, ಕೊಹ್ಲಿ ನಾಯಕತ್ವದಲ್ಲಿ ಸಾಧ್ಯವಾಗದ ದಾಖಲೆಯನ್ನ 25 ವರ್ಷದ ಶುಭ್ಮನ್ ಗಿಲ್ ಸಾಧಿಸಿದ್ದಾರೆ.
ಇಲ್ಲಿಯವರೆಗೆ ಕಪಿಲ್ ದೇವ್ ಮಾತ್ರ ಭಾರತ ತಂಡವನ್ನ ಸೋಲಿನಿಂದ ಪಾರು ಮಾಡಿ ಡ್ರಾ ಸಾಧಿಸುವಂತೆ ಮಾಡಿದ್ದರು.
ಆದರೆ ಉಳಿದ 7 ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು. ಇದೀಗ ಎಡ್ಜ್ಬಾಸ್ಟನ್ ಇಂಗ್ಲೆಂಡ್ ಭದ್ರಕೋಟೆಯನ್ನ ಯುವಪಡೆ ಛಿದ್ರ ಮಾಡಿದೆ. ಈ ಮೂಲಕ ಗಿಲ್ ನಾಯಕತ್ವದಲ್ಲಿ ಹೊಸ ಯುಗ ಆರಂಭಿಸಿದ್ದಾರೆ.
ನಾಯಕ ಗಿಲ್ ಆಟ ನಮ್ಮ ಸೋಲಿಗೆ ಕಾರಣ ಎಂದ ಸ್ಟೋಕ್ಸ್
ಪಂದ್ಯ ಸೋತ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ತಂಡದ ಸೋಲಿಗೆ ಕಾರಣಗಳನ್ನು ಬಹಿರಂಗಪಡಿಸಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಕುರಿತು ಮಾತನಾಡಿದ ಸ್ಟೋಕ್ಸ್ “ಗಿಲ್ ಅವರ ಅದ್ಭುತ ಬ್ಯಾಟಿಂಗ್ ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.
ಅವರು ಎಲ್ಲಿಯೂ ನಮ್ಮ ಬೌಲರ್ಗಳಿಗೆ ಅವಕಾಶವನ್ನೇ ನೀಡಲಿಲ್ಲ, ಅವರ ಬ್ಯಾಟಿಂಗ್ ಅಸ್ಟೊಂದು ಸೊಗಸಾಗಿತ್ತು” ಎಂದಿದ್ದಾರೆ.