‘ಕೊಡವ ಸಮುದಾಯದಲ್ಲಿ ನಾನೇ ಫಸ್ಟ್’.. 

‘ಕೊಡವ ಸಮುದಾಯದಲ್ಲಿ ನಾನೇ ಫಸ್ಟ್’.. ನಟಿ ಪ್ರೇಮಾಗಿಂತಲೂ ಮೊದಲೇ ನಟಿಯಾದ್ರಾ ರಶ್ಮಿಕಾ ಮಂದಣ್ಣ..?

ಪ್ರೇಮಾ ಎವರ್​​ಗ್ರೀನ್ ನಟಿ. ಕನ್ನಡ ಮಾತ್ರ ಅಲ್ಲ, ಬೇರೆ ಭಾಷೆಯಲ್ಲೂ ಕಮಾಲ್ ಮಾಡಿದ್ದ ಚೆಲುವೆ. 90ರ ಕಿಡ್ಸ್​ ಹಾರ್ಟ್​ ಕದ್ದ ಮಹಾನಟಿ. ದಶಕಗಳ ಕಾಲ ಸ್ಯಾಂಡಲ್​ವುಡ್​ನಲ್ಲಿ ಮಹಾರಾಣಿಯಾಗಿ ಮೆರೆದಾಡಿದ್ದ ಚಂದ್ರಮುಖಿ.

ಕೊಡವತಿ ಪ್ರೇಮಾ, ಓಂ, ಉಪೇಂದ್ರ, ಚಂದ್ರಮುಖಿ ಪ್ರಾಣಸಖಿ, ಕನಸುಗಾರ, ನಮ್ಮೂರ ಮಂದಾರ ಹೂವೆ, ಯಜಮಾನ ಸೇರಿದಂತೆ ತೆಲುಗಿನಲ್ಲಿ 27 ಸಿನಿಮಾ ಸೇರಿ ಸೌತ್‌ ಇಂಡಿಯಾದ ಎಲ್ಲಾ ಭಾಷೆಗಳಲ್ಲೂ ಸೇರಿಸಿ 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದ ಮೋಹಕ ತಾರೆ. ಸೌತ್ ಇಂಡಸ್ಟ್ರಿಯನ್ನ ಆಳಿದ್ದ ಕೂರ್ಗ್‌ನ ಹೆಣ್ಮುಮಗಳು. ಅಂಥಾ ನಟಿಯ ಸಾಧನೆಯನ್ನೇ ಕಡೆಗಣಿಸಿ ರಶ್ಮಿಕಾ ಮಾತ್ನಾಡಿ ಬಿಟ್ಟಿದ್ದಾರೆ. ಓಂ ರಿಲೀಸ್ ಆದಾಗ ರಶ್ಮಿಕಾ ಹುಟ್ಟೇ ಇರ್ಲಿಲ್ಲ. ರಶ್ಮಿಕಾ ಕಣ್ಣು ಬಿಡೋಕು ಮುನ್ನವೇ ಪ್ರೇಮಾ ಅವ್ರು ಕನ್ನಡ ಚಿತ್ರರಂಗವನ್ನ ಆಳಿದ್ದವ್ರು.

ಕೊಡವ ನಟಿಯರು          ಸಿನಿಮಾ ಇಂಡಸ್ಟ್ರಿ ಎಂಟ್ರಿ

ಪ್ರೇಮಾ                                  1994
ಡೈಸಿ ಬೋಪಣ್ಣ                      2003
ಹರ್ಷಿಕಾ ಪೂಣಚ್ಚ                  2008
ನಿಧಿ ಸುಬ್ಬಯ್ಯ                        2009
ಶುಭ್ರ ಅಯ್ಯಪ್ಪ                       2014
ತಪಸ್ವಿನಿ ಪೂಣಚ್ಚ                  2022

1994ರಲ್ಲೇ ಸ್ಯಾಂಡಲ್​ವುಡ್​ಗೆ ಕಾಲಿಟ್ಟ ನಟಿ ಪ್ರೇಮಾ ಕನ್ನಡ, ತಮಿಳು, ಸುಮಾರು 26 ತೆಲುಗು ಸಿನಿಮಾ ಸೇರಿ ಮಲಯಾಳಂನಲ್ಲೂ ಕಮಾಲ್ ಮಾಡಿದ್ದಾರೆ. ಇನ್ನು, 2003ರಲ್ಲಿ ಎಂಟ್ರಿಯಾದ ಕೊಡವತಿ ಡೈಸಿ ಬೋಪಣ್ಣ ಬಾಲಿವುಡ್‌ ಸೇರಿ ಬಹುಭಾಷೆಗಳಲ್ಲಿ ನಟಿಸಿದ್ದಾರೆ. 2008ರಲ್ಲೇ ಹರ್ಷಿಕಾ ಪೂಣಚ್ಚ ಬಣ್ಣ ಲೋಕಕ್ಕೆ ಬಂದ್ರೆ, 2009ರಲ್ಲಿ ನಿಧಿ ಸುಬ್ಬಯ್ಯ ಸೌತ್ ಇಂಡಿಯಾ ಸೇರಿ 4 ಹಿಂದಿ ಸಿನಿಮಾಗಳಲ್ಲೂ ನಟಿಸಿದ್ರು. 2012ರಲ್ಲಿ ಶುಭ್ರ ಅಯ್ಯಪ್ಪ ಬಂದಿದ್ರೆ, 2022ರಲ್ಲಿ ತಪಸ್ವಿನಿ ಪೂಣಚ್ಚ ಸಿನಿಮಾ ಫೀಲ್ಡ್​ಗೆ ಬಂದರು.

ರಶ್ಮಿಕಾ ಮಂದಣ್ಣ, ನಟಿ:

ನನ್ನ ಮೊದಲ ಚೆಕ್ ಸಿಕ್ಕಾಗ, ಮನೆಯಲ್ಲಿ ಏನೆಲ್ಲಾ ಮಾತಾಡುತ್ತಿದ್ದರು ಅಂತ ನನಗೆ ನೆನಪಿದೆ, ಅದು ಸುಲಭವೂ ಆಗಿರಲಿಲ್ಲ. ಯಾಕಂದ್ರೆ, ಕೂರ್ಗ್ ಸಮುದಾಯದಲ್ಲಿ, ಯಾರೂ ಸಿನಿಮಾ ಜಗತ್ತಿಗೆ ಬಂದಿರಲಿಲ್ಲ. ನನಗನಿಸುತ್ತೆ, ಇಡೀ ಸಮುದಾಯದಲ್ಲಿ ನಾನೇ ಮೊದಲು ಇಂಡಸ್ಟ್ರಿಗೆ ಬಂದಿದ್ದು.

ರಶ್ಮಿಕಾ ಹೇಳಿಕೆ ವಿವಾದ ಹುಟ್ಟು ಹಾಕಿರೋದೇನೋ ನಿಜ. ಆದ್ರೆ, ತನ್ನನ್ನ ತಾನು ಹೊಗೊಳೋ ಭರದಲ್ಲಿ ವಿಚಾರ ಗೊತ್ತಿಲ್ದೇ ತನ್ನ ಕಿವಿಗೆ ತಾನೇ ಹೂ ಇಟ್ಕೊಂಡಿದ್ದು ಎಷ್ಟು​ ಸರಿ? ಅಲ್ಲದೆ ಕೂರ್ಗ್ ಕಮ್ಯುನಿಟಿಯಿಂದ ತಾನೇ ಮೊದ್ಲು ನಟಿಯಾಗಿದ್ದು ಅಂತ ಹೇಳೋ ಮೂಲಕ ಅಲ್ಲೀವರೆಗೂ ಆ ಸಮುದಾಯ ಹಿಂದುಳಿದಿತ್ತು ಅನ್ನೋ ಅರ್ಥದಲ್ಲಿ ಮಾತ್ನಾಡಿದ್ದೆಷ್ಟು ಸರಿ? ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್. ಚಿಕ್ಕವಯಸ್ಸಲ್ಲೇ ಅಷ್ಟ್​ ಹೆಸ್ರು ಮಾಡಿರೋದು ಕನ್ನಡಿಗರಿಗೂ ಹೆಮ್ಮೆ ಇದೆ. ಆದ್ರೆ, ಇಂತವ್ರು ಮಾತಿನ ಮೇಲೆ ನಿಗಾ ಇಡಬೇಕು.

Leave a Reply

Your email address will not be published. Required fields are marked *