
ಪ್ರೋಟೀನ್ಭರಿತ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ, ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತವೆ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತವೆ ಮತ್ತು ಇಡೀ ದಿನ ಸಕ್ರಿಯವಾಗಿರಲು ಶಕ್ತಿ ನೀಡುತ್ತವೆ. ಹಾಗಿದ್ರೆ ಬನ್ನಿ ಬೆಳಿಗ್ಗೆ ಮಾಡಿಕೊಳ್ಳಬಹುದಾದ ಪ್ರೋಟೀನ್-ಪ್ಯಾಕ್ಡ್ ಬ್ರೇಕ್ಫಾಸ್ಟ್ ರೆಸಿಪಿಗಳನ್ನು ನೋಡೋಣ.
ಬೆಳಗ್ಗಿನ ತಿಂಡಿ ರಾಜನಂತೆ ಇರಬೇಕಂತೆ. ಹಾಗಂತ ದಿನಾಲೂ ತಿಂಡಿಗೆ ಪೂರಿ, ಎಣ್ಣೆಯಲ್ಲಿ ಕರಿದ ವಡೆ, ಕಾಫಿ, ಟೀ, ಸಿಹಿ ತಿಂದರೆ ನಮ್ಮ ಕಥೆ ಅಷ್ಟೇ. ಬೆಳಿಗ್ಗೆ ಎಷ್ಟು ತಿನ್ನುತ್ತೇವೆ ಅನ್ನೋದಕ್ಕಿಂತ ಏನ್ ತಿನ್ನುತ್ತೇವೆ ಅನ್ನೋದು ಮುಖ್ಯ. ಬ್ರೇಕ್ಫಾಸ್ಟ್ ಹೇಗಿರಬೇಕು ಅಂದರೆ, ಅದರಲ್ಲಿ ಹೆಚ್ಚಿನ ಪ್ರೋಟೀನ್ ಇರಬೇಕು. ನಟ್ಸ್, ಸೀಡ್ಸ್, ಮೊಟ್ಟೆ, ಮೊಳಕೆಕಾಳುಗಳು, ಪನೀರ್ ಇವುಗಳು ನಮ್ಮ ತಿಂಡಿಯಲ್ಲಿರಬೇಕು.
ಪ್ರೋಟೀನ್ಭರಿತ ಆಹಾರಗಳು ನಿಧಾನವಾಗಿ ಜೀರ್ಣವಾಗುತ್ತವೆ, ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತವೆ, ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತವೆ ಮತ್ತು ಇಡೀ ದಿನ ಸಕ್ರಿಯವಾಗಿರಲು ಶಕ್ತಿ ನೀಡುತ್ತವೆ. ಹಾಗಿದ್ರೆ ಬನ್ನಿ ಬೆಳಿಗ್ಗೆ ಮಾಡಿಕೊಳ್ಳಬಹುದಾದ ಪ್ರೋಟೀನ್-ಪ್ಯಾಕ್ಡ್ ಉಪಹಾರ ಪಾಕವಿಧಾನಗಳನ್ನು ನೋಡೋಣ.
ಪ್ರೋಟೀನ್-ಭರಿತ ಉಪಹಾರ 1 – ಆಮ್ಲಾ ಚಟ್ನಿ ಜೊತೆ ಅಮರಂತ್ ಮೂಂಗ್ ದಾಲ್ ಚಿಲ್ಲಾ
ಚಿಲ್ಲಾಗೆ ಬೇಕಾಗುವ ಸಾಮಗ್ರಿಗಳು:
½ ಕಪ್ ಹೆಸರುಕಾಳು ಬೇಳೆ (8 ಗಂಟೆಗಳ ಕಾಲ ನೆನೆಸಿಟ್ಟಿದ್ದು)
¼ ಕಪ್ ಅಮರಂತ್ ಹಿಟ್ಟು (ಅಥವಾ ಜೋಳ/ರಾಗಿ ಹಿಟ್ಟು)
1 ಸಣ್ಣಗೆ ಹೆಚ್ಚಿರುವ ಈರುಳ್ಳಿ
1 ಸಣ್ಣಗೆ ಹೆಚ್ಚಿರುವ ಹಸಿರು ಮೆಣಸಿನಕಾಯಿ
¼ ಟೀಸ್ಪೂನ್ ಅರಿಶಿನ ಪುಡಿ
½ ಟೀಸ್ಪೂನ್ ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು
2 ಟೀಸ್ಪೂನ್ ಕೊತ್ತಂಬರಿ ಸೊಪ್ಪು
A2 ತುಪ್ಪ
ವಿಧಾನ
ನೆನೆಸಿದ ಹೆಸರುಕಾಳನ್ನು ಬಸಿದು ¼ ಕಪ್ ನೀರಿನೊಂದಿಗೆ ರುಬ್ಬಿ ನಯವಾದ ಬ್ಯಾಟರ್ ಮಾಡಿಕೊಳ್ಳಿ
ಈ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ಅಮರಂಥ್ ಹಿಟ್ಟು, ಅರಿಶಿನ ಪುಡಿ, ಜೀರಿಗೆ, ಉಪ್ಪು, ಈರುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಳ್ಳಿ.
ಪ್ಯಾನ್ಗೆ ತುಪ್ಪ ಸವರಿ, ಬ್ಯಾಟರ್ ಅನ್ನು ಸುರಿದು ದೋಸೆ ರೀತಿ ಸ್ಪ್ರೆಡ್ ಮಾಡಿಕೊಳ್ಳಿ.
ಚಿನ್ನದ ಬಣ್ಣ ಮತ್ತು ಗರಿಗರಿಯಾಗುವವರೆಗೆ ಪ್ರತಿ ಬದಿಯನ್ನು 2–3 ನಿಮಿಷ ಬೇಯಿಸಿಕೊಂಡರೆ ಪ್ರೋಟೀನ್ ಭರಿತ ಜೊತೆ ಅಮರಂತ್ ಮೂಂಗ್ ದಾಲ್ ಚಿಲ್ಲಾ ರೆಡಿ. ಇದನ್ನು ನೆಲ್ಲಿಕಾಯಿ ಚಟ್ನಿ ಜೊತೆ ತಿಂದ್ರೆ ಮತ್ತಷ್ಟು ಪ್ರಯೋಜ ಲಭ್ಯವಾಗುತ್ತದೆ.
ಮಾವಿನಕಾಯಿ ಚಟ್ನಿಯೊಂದಿಗೆ ಮೊರಿಂಗಾ, ಮಖಾನಾ ಮತ್ತು ದಾಲ್ ಪರಾಠ
ಬೇಕಿರುವ ಸಾಮಗ್ರಿಗಳು:
½ ಕಪ್ ಕಡಲೆ ಬೇಳೆ (8 ಗಂಟೆಗಳ ಕಾಲ ನೆನೆಸಿಟ್ಟಿದ್ದು)
¼ ಕಪ್ ಹುರಿದ ಮಖಾನ, (ತರಿ ತರಿ ಪುಡಿ)
1 ಟೀಸ್ಪೂನ್ ಒಣಗಿದ ಮೊರಿಂಗಾ ಪುಡಿ (ಅಥವಾ 2 ಟೀಸ್ಪೂನ್ ತಾಜಾ ಮೊರಿಂಗಾ ಎಲೆಗಳು, ನುಣ್ಣಗೆ ಕತ್ತರಿಸಿದ್ದು)
1 ಕಪ್ ಗೋಧಿ ಹಿಟ್ಟು
½ ಟೀಸ್ಪೂನ್ ಜೀರಿಗೆ ಪುಡಿ
¼ ಟೀಸ್ಪೂನ್ ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
½ ಟೀಸ್ಪೂನ್ ತುಪ್ಪ
ನೀರು
ಮಾಡುವ ವಿಧಾನ
ಗೋಧಿ ಹಿಟ್ಟನ್ನು ನೀರು ಮತ್ತು ½ ಟೀಸ್ಪೂನ್ ತುಪ್ಪದೊಂದಿಗೆ ಹದವಾಗಿ ಕಲೆಸಿಕೊಂಡು 15 ನಿಮಿಷಗಳ ಕಾಲ ಪಕ್ಕಕ್ಕಿಡಿ.
ನೆನೆಸಿದ ಕಡಲೆ ಬೇಳೆಯನ್ನು ಗಟ್ಟಿಯಾಗಿ ರುಬ್ಬಿಕೊಂಡು ಅದಕ್ಕೆ, ಪುಡಿಮಾಡಿದ ಮಖಾನ, ಮೊರಿಂಗಾ ಪುಡಿ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಬೆರೆಸಿ.
ಈಗ ಗೋದಿ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಈ ಕಡಲೆಬೇಳೆ ಹೂರಣವನ್ನು ಅದರೊಳಗೆ ಸ್ಟಫ್ ಮಾಡಿ ಪರಾಠವಾಗಿ ಒರೆದುಕೊಳ್ಳಿ.
ಮಧ್ಯಮ ಉರಿಯಲ್ಲಿ ತವಾ ಬಿಸಿ ಮಾಡಿ. ಪರಾಠವನ್ನು ತುಪ್ಪ ಬಳಸಿ ಎರಡೂ ಬದಿಗಳಲ್ಲಿ ಗೋಲ್ಡನ್ ಬಣ್ಣ ಬರುವವರೆಗೆ ತಿರುಗಿಸಿ ಬೇಯಿಸಿ.
ಈ ಪಾಠವನ್ನು ಮಾವಿನ ಕಾಯಿ ಚಟ್ನಿ ಜೊತೆ ತಿನ್ನೋದರಿಂದ ನಿಮ್ಮ ಬ್ರೇಕ್ಫಾಸ್ಟ್ ಮತ್ತಷ್ಟು ಹೆಲ್ತಿಯಾಗುತ್ತದೆ.