
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕ್ಯಾಪ್ಟನ್ ಶುಭ್ಮನ್ ಗಿಲ್ ಅವರು ದ್ವಿಶತಕ ಬಾರಿಸಿದ್ದಾರೆ. ಸದ್ಯ ಟೀಮ್ ಇಂಡಿಯಾ 6 ವಿಕೆಟ್ಗೆ 496 ರನ್ ಗಳಿಸಿದ್ದು ಬ್ಯಾಟಿಂಗ್ ಮಾಡುತ್ತಿದೆ. ಗಿಲ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಇದರಿಂದ ಟೀಮ್ ಇಂಡಿಯಾ ಮೊದಲ ಬ್ಯಾಟಿಂಗ್ ಮಾಡುತ್ತಿದೆ. ಈಗಾಗಲೇ ಒಂದು ದಿನ ಮುಗಿದಿದ್ದು ಎರಡನೇ ದಿನದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮುಂದುವರೆಸಿದೆ.
ಐದು ವಿಕೆಟ್ಗೆ 305 ರನ್ಗಳಿಂದ ಇಂದು ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಉತ್ತಮ ಬ್ಯಾಟಿಂಗ್ ಮಾಡುತ್ತಿದೆ. ನಿನ್ನೆಯೇ ಸೆಂಚುರಿ ಸಿಡಿಸಿದ್ದ ಶುಭ್ಮನ್ ಗಿಲ್ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಅದರಂತೆ ಇಂಗ್ಲೆಂಡ್ ವಿರುದ್ಧ ಇಂದು ಅದ್ಭುತವಾದ ಡಬಲ್ ಹಂಡ್ರೆಂಡ್ ಬಾರಿಸಿ ಸಂಭ್ರಮಿಸಿದ್ದಾರೆ. ಇನ್ನಿಂಗ್ಸ್ನಲ್ಲಿ 311 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ ಎರಡು ಸಿಕ್ಸರ್ ಹಾಗೂ 21 ಮನಮೋಹಕವಾದ ಬೌಂಡರಿಗಳಿಂದ 200 ರನ್ ಬಾರಿಸಿದ್ದಾರೆ.
ಇದುವರೆಗೆ ಭಾರತ ತಂಡದ ಯಾವೊಬ್ಬ ನಾಯಕನು ಇಂಗ್ಲೆಂಡ್ ನೆಲದಲ್ಲಿ ಡಬಲ್ ಹಂಡ್ರೆಡ್ ಬಾರಿಸಿಲ್ಲ. ಗಂಗೂಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈ ಎಲ್ಲರೂ ಕ್ಯಾಪ್ಟನ್ ಆಗಿದ್ದರೂ ಆಂಗ್ಲರ ನಾಡಿನಲ್ಲಿ ದ್ವಿಶತಕ ಗಳಿಸಿಲ್ಲ.
ಆದರೆ ಶುಭ್ಮನ್ ಗಿಲ್ ಅವರು ದ್ವಿಶತಕ ಬಾರಿಸುವ ಮೂಲಕ ಮಹತ್ತರವಾದ ಸಾಧನೆ ಮಾಡಿದವರು ಆಗಿದ್ದಾರೆ. ಸದ್ಯ ಭಾರತ 500 ರನ್ಗಳತ್ತ ಮುನ್ನುಗ್ಗುತ್ತಿದೆ