IND vs ENG 2nd Test: ಮೊದಲ ದಿನದ ಅಂತ್ಯಕ್ಕೆ 310 ರನ್ ಗಳಿಸಿದ ಭಾರತ!

ಎಜ್‌ಬಾಸ್ಟನ್‌: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ನಾಯಕ ಶುಭಮನ್‌ ಗಿಲ್‌ ಅವರ ಅಮೋಘ ಶತಕದ ಬಲದಿಂದ ಐದು ವಿಕೆಟ್ ನಷ್ಟಕ್ಕೆ ಭಾರತ 310 ರನ್ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿರಲಿಲ್ಲ.

ಆರಂಭದಲ್ಲೇ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಕೆ.ಎಲ್.ರಾಹುಲ್ (2) ನಿರಾಸೆ ಅನುಭವಿಸಿದರು.
ಮೂರನೇ ಕ್ರಮಾಕಂದಲ್ಲಿ ಕ್ರೀಸಿಗಿಳಿದ ಕರುಣ್ ನಾಯರ್ (31) ಉತ್ತಮವಾಗಿ ಮೂಡಿಬಂದರೂ ಹೆಚ್ಚು ಹೊತ್ತು ನೆಲೆಯೂರಲು ಸಾಧ್ಯವಾಗಲಿಲ್ಲ. 50 ಎಸೆತಗಳಲ್ಲಿ ಐದು ಬೌಂಡರಿ ನೆರವಿನಿಂದ 31 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಯಶಸ್ವಿ ಜೈಸ್ವಾಲ್ 13 ಬೌಂಡಿರಿ ಸಿಡಿಸಿ, 87 ರನ್‌ ಗಳಿಸಿದರು.
ನಾಯಕ ಶುಭಮನ್ ಗಿಲ್ ಜೊತೆ ಜೈಸ್ವಾಲ್ ಮೂರನೇ ವಿಕೆಟ್‌ಗೆ 66 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಗಿಲ್‌ 216 ಬೌಲ್‌ಗಳಿಗೆ 114 ರನ್‌ ಗಳಿಸಿದರು.
ಈ ನಡುವೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ದಾಳಿಯಲ್ಲಿ ತಾಳ್ಮೆ ಕಳೆದುಕೊಂಡ ಜೈಸ್ವಾಲ್, ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದಾಗಿ ಕೇವಲ 13 ರನ್ ಅಂತರದಲ್ಲಿ ಶತಕ ವಂಚಿತರಾದರು.

Leave a Reply

Your email address will not be published. Required fields are marked *