MODI ಕೇಳಿ ಅವರು ಡಿಕೆ.. ಡಿಕೆ ಅಂತಾರೆ : ಮತ್ತೆ ಸುದ್ದಿಯಾದ ಡಿಕೆಶಿ! ಬೆಂಗಳೂರು: ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿ ಕುತೂಹಲ ಮೂಡಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಈಗ ಮತ್ತೊಂದು ಡೈಲಾಗ್ ಮೂಲಕ ಸುದ್ದಿಯಲ್ಲಿದ್ದಾರೆ.
ಬಸವನಗುಡಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ವೇದಿಕೆಗೆ ಹೋದಾಗ ಮೋದಿ ಮೋದಿ (Modi) ಎಂದು ಕೆಲವರು ಕೂಗಿದ್ದಾರೆ. ಆಗ ನಕ್ಕ ಡಿಕೆಶಿ, ಮೋದಿ ಮೋದಿ ಅಂತಿದ್ದೀರಾ ಬಹಳ ಸಂತೋಷ. ಆದ್ರೆ ಮೋದಿ ಕೇಳಿ ಅವರು ಡಿಕೆ.. ಡಿಕೆ ಅಂತಾರೆ ಅಂತ ಟಾಂಗ್ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಆಡಿರುವ ಮಾತುಗಳು ತುಂಬಾ ವೈರಲ್ ಆಗಿದೆ. ಡಿಕೆಶಿ ಮಾತಿನ ಒಳ ಅರ್ಥ ಏನು ಎಂಬ ಚರ್ಚೆಗಳು ಆಗುತ್ತಿವೆ. ಪವರ್ ಶೇರಿಂಗ್ ಹೇಳಿಕೆಯಿಂದ ಆರಂಭದಿಂದ ಹಿಡಿದು ಆರ್ಎಸ್ಎಸ್ ಗೀತೆ, ಮೈಸೂರು ಚಾಮುಂಡಿ ಬೆಟ್ಟ..ಹೀಗೆ ಒಂದಿಲ್ಲೊಂದು ವಿಷಯದಲ್ಲಿ ಡಿಕೆ ಈಗ ಚರ್ಚೆಯಾಗುತ್ತಿದ್ದಾರೆ.