GST 2.0: ‘ಮುಂದಿನ ಪೀಳಿಗೆಗೆ ವರದಾನ’ ಎಂದ ಪ್ರಧಾನಿ ಮೋದಿ! ಇದು ಜನರಿಗೆ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಲಾಭ ತರಲಿದೆ ಅಂತಲೂ ಹೇಳಿದ್ದಾರೆ.
GST 2.0 ಸುಧಾರಣೆ
ಭಾರತದ ಆರ್ಥಿಕತೆಯನ್ನು ಬಲಪಡಿಸಲು ಮುಂದಿನ ಪೀಳಿಗೆಯ ಸುಧಾರಣೆಗಳು ಬೇಕು ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. GST ಸುಧಾರಣೆಗಳು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಹೆಜ್ಜೆ. ಈ ವರ್ಷದ ದೀಪಾವಳಿ & ನವರಾತ್ರಿಗೆ ಡಬಲ್ ಖುಷಿ ಸಿಕ್ಕಂತಾಗಿದೆ.
ನವರಾತ್ರಿಯಲ್ಲಿ ಆರಂಭ
ಸರಳೀಕೃತ GST ನಿಯಮಗಳು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ ಅಂತ ಪ್ರಧಾನಿ ಮೋದಿ ಘೋಷಿಸಿದ್ದಾರೆ. “GST ಈಗ ಇನ್ನೂ ಸುಲಭವಾಗಿದೆ. ಸೆ. 22, ನವರಾತ್ರಿಯ ಮೊದಲ ದಿನ ಈ ಮುಂದಿನ ಪೀಳಿಗೆಯ ಸುಧಾರಣೆಗಳು ಜಾರಿಗೆ ಬರಲಿವೆ” ಅಂತ ಅವರು ಹೇಳಿದ್ದಾರೆ.
ಜನರಿಗೆ ಡಬಲ್ ಖುಷಿ
8 ವರ್ಷಗಳ ಹಿಂದೆ GST ಜಾರಿಯಾದಾಗ, ಅದು ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿತ್ತು. ಈಗ, “GST 2.0” ಸುಧಾರಣೆಗಳು ಮುಂದಿನ ಪೀಳಿಗೆಗೆ ವರದಾನ. ಇದು ದೇಶಕ್ಕೆ ಬೆಂಬಲ ಮತ್ತು ಅಭಿವೃದ್ಧಿಯ ಡಬಲ್ ಡೋಸ್ ಆಗಿದೆ. ಈ ಹೊಸ ಸುಧಾರಣೆಗಳು ದೇಶದ ಪ್ರತಿ ಕುಟುಂಬಕ್ಕೆ, ವಿಶೇಷವಾಗಿ ಬಡವರು, ಮಧ್ಯಮ ವರ್ಗ, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಕರಿಗೆ ದೊಡ್ಡ ಲಾಭಗಳನ್ನು ತರಲಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.
ಜೀವ ವಿಮೆಗೆ ತೆರಿಗೆ ಇಲ್ಲ
GST ಕೌನ್ಸಿಲ್ ಅನುಮೋದಿಸಿರುವ ಹೊಸ ಸುಧಾರಣೆಗಳಲ್ಲಿ, ಆರೋಗ್ಯ ಮತ್ತು ವಿಮಾ ಕ್ಷೇತ್ರದಲ್ಲಿ ಜನರಿಗೆ ದೊಡ್ಡ ರಿಯಾಯಿತಿ ನೀಡಲಾಗಿದೆ. ವೈಯಕ್ತಿಕ ವೈದ್ಯಕೀಯ ಮತ್ತು ಜೀವ ವಿಮೆಗೆ ಜಿಎಸ್ಟಿಯನ್ನು ಸಂಪೂರ್ಣವಾಗಿ ತೆಗೆದುಹಾಕಿ, ಅವುಗಳನ್ನು ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಈ ಸೇವೆಗಳು ಹೆಚ್ಚಿನ ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ.
ವೈದ್ಯಕೀಯ ವಸ್ತುಗಳ ತೆರಿಗೆ ಕಡಿತ
ಇದಲ್ಲದೆ, ಹಲವು ಅಗತ್ಯ ವೈದ್ಯಕೀಯ ವಸ್ತುಗಳ ಜಿಎಸ್ಟಿಯನ್ನು 12% ರಿಂದ 5% ಕ್ಕೆ ಇಳಿಸಲಾಗಿದೆ. ಇದರಲ್ಲಿ ಥರ್ಮಾಮೀಟರ್, ವೈದ್ಯಕೀಯ ದರ್ಜೆಯ ಆಮ್ಲಜನಕ, ಎಲ್ಲಾ ರೋಗನಿರ್ಣಯ ಉಪಕರಣಗಳು, ಗ್ಲುಕೋಮೀಟರ್ಗಳು ಮತ್ತು ಪರೀಕ್ಷಾ ಪಟ್ಟಿಗಳು, ಹಾಗೆಯೇ ಸರಿಪಡಿಸುವ ಕನ್ನಡಕಗಳು ಸೇರಿವೆ. ಈ ತೆರಿಗೆ ಕಡಿತದಿಂದಾಗಿ ಅಗತ್ಯ ವೈದ್ಯಕೀಯ ವಸ್ತುಗಳ ಬೆಲೆ ಇಳಿಯುವ ನಿರೀಕ್ಷೆಯಿದೆ.