ದರ್ಶನ್ ಕುದುರೆ ಹತ್ತೋದ ಹೇಳಿಕೊಟ್ಟ ದಿನಗಳ ಮೆಲುಕು ಹಾಕಿದ ಕಿಚ್ಚ! ಇಂದು ಕಿಚ್ಚ ಸುದೀಪ್ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಇವತ್ತು ಮಾಧ್ಯಮಗಳ ಜೊತೆ ಸುದೀಪ್ ಮಾತುಕತೆ ನಡೆಸಿದರು.
ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರ್ಮ್ ಹೌಸ್ನಲ್ಲಿ ಕುದುರೆ ಸವಾರಿ ಕಲಿಯಲು ಮುಂದಾಗಿದ್ದ ಕತೆಯನ್ನ ಮೆಲುಕು ಹಾಕಿದರು.
ಪೌರಾಣಿಕ ಸಿನಿಮಾ ಮಾಡುವ ವಿಚಾರ ಮಾತುಕತೆ ನಡೆಯುತ್ತಿದ್ದಾಗ ಕುದುರೆ ವಿಚಾರ ಬಂದಿದೆ. ಈ ವೇಳೆ ಮಾತನಾಡಿರುವ ಸುದೀಪ್.. ದರ್ಶನ್ ನನಗೆ ಕುದುರೆ ಹತ್ತೋದನ್ನ ಹೇಳಿಕೊಟ್ಟ.
ಕುದುರೆ ಓಡಿಸೋದು ಕಷ್ಟ, ಒಂದು ಸಲ ಬಿದ್ದಿದ್ದೆ. ಅದಕ್ಕಾಗಿ ನಾನು ಪೌರಾಣಿಕ ಸಿನಿಮಾ ಮಾಡಲ್ಲ ಎಂದಿದ್ದಾರೆ.
ಸುದೀಪ್ ಹೇಳಿದ್ದೇನು..?
ನನಗೆ ಕುದುರೆ ಓಡಿಸೋದು ಆಗಲ್ಲ. ಯಾವುದೋ ಒಂದು ಪಾತ್ರ ಸಿಕ್ಕಿತ್ತು. ಆಗ ಪ್ರ್ಯಾಕ್ಟೀಸ್ ಮಾಡುವಾಗ ಅನುಭವ ಆಯಿತು.
ಆಗ ಹೇಳಿದರು, ಹೀರೋ ಅಂದರೆ ಫೈಟ್ ಮಾಡೋದು ಕಲಿಯಬೇಕು, ಕುದುರೆ ಓಡಿಸೋದು ಕಲಿಯಬೇಕು ಅಂತಾ ಏನೇನೋ ಹೇಳಿದ್ದರು.
ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೆ. ಕಲಿತೆ ಕೂಡ. ಒಂದು ವಾರ ಪ್ರ್ಯಾಕ್ಟೀಸ್ ಮಾಡಿದ್ದೆ. 10 ದಿನ ಚೆನ್ನಾಗಿ ಓಡಿಸಿದೆ. ಒಂದು ದಿನ ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತು ಅಂತಾ ಗೊತ್ತಿಲ್ಲ.
ಕುದಿರೆಯಿಂದ ಬಿದ್ದೆ. ಕಾಲು ಸಿಕ್ಕಾಕಿಕೊಂಡಿತ್ತು. ಸುಮಾರು 20 ಮೀಟರ್ ನನ್ನ ಎಳೆದುಕೊಂಡು ಹೋಗಿತ್ತು. ಆಗ ಆಗಿರುವ ಭಯ ಇದೆಯಲ್ಲ.
ಆಗಲೇ ಪ್ರಪಂಚ ಏನು ಅಂತಾ ಗೊತ್ತಾಯ್ತು. ಏನೇ ಹತ್ತಿದ್ದರೂ ಅದರ ಹ್ಯಾಂಡಲ್ ಮತ್ತು ಬ್ರೇಕ್ ಎಲ್ಲಿದೆ ಅಂತಾ ಗೊತ್ತಿರಬೇಕು. ಕುದುರೆಗೆ ಬ್ರೇಕ್ ಎಲ್ಲಿದೆ ಅಂತಾ ಗೊತ್ತಿರಲಿಲ್ಲ.
ಇದೆಲ್ಲದರ ಹೊರತುಪಡಿಸಿ ಇನ್ನೊಂದು ದಿನ ನಾವು ದರ್ಶನ್ ತೋಟಕ್ಕೆ ಹೋಗಿದ್ವಿ.
ಅಲ್ಲಿಗೆ ಹೋದಾಗ ಹತ್ತು ಹತ್ತು ಅಂತಾ ತುಂಬಾ ಫೋರ್ಸ್ ಮಾಡಿದ. ನೀನು ತಿಪ್ಪರಲಾಗ ಹೊಡೆದರೂ, ನೀನು ಬೇಡ, ನಿನ್ನ ಕುದುರೆ ಸವಾಸವೂ ಬೇಡ ಅಂತಾ ಹೇಳಿದ್ದೆ.
ಆದರೂ ಕುದುರೆ ಹತ್ತಿಸಿದ್ದರು. ಆಗ ಹಿಡಿದುಕೊಂಡು ಇದ್ದರು. ಕುದುರೆ ಹಾಗೆಯೇ ಜೋರಾಗಿ ಹೋಗುತ್ತಿತ್ತು. ಹೋಗ್ತ ಹೋಗ್ತ ಆತ ಬಿದ್ದ. ಅದನ್ನು ನೋಡಿ ನಿಲ್ಲಿಸಿ ಎಂದು ಹೇಳಿದೆ. ಅವತ್ತು ಇಳಿದವನು ಇನ್ನೂ ಕುದುರೆ ಹತ್ತಿಲ್ಲ.
ಪೌರಾಣಿಕ ಸಿನಿಮಾ ಮಾಡಿದರೆ ನಮ್ಮನ್ನು ಮೊದಲು ಯುದ್ಧಕ್ಕೆ ಬಿಡ್ತೀರಿ. ಆಗ ಕುದುರೆ ಮೇಲೆ ಬರಬೇಕು. ಆದಲ್ಲ ಯಾಕೆ ಬೇಕು, ಈಗ ಮಾಡ್ತಿರೋ ಸಿನಿಮಾ ಮಾಡಿದ್ರೆ ಬೈಕಲ್ಲೋ, ಕಾರಲ್ಲೂ ಬರ್ತೀವಿ.
ಬೇಗ ಮುಗಿಸಿ ಮನೆಗೆ ಹೋಗಬಹುದು. ಜೊತೆಗೆ ಸಿನಿಮಾ ಕೂಡ ಬೇಗ ರಿಲೀಸ್ ಆಗಲಿದೆ ಎಂದರು.