ಸುದೀಪ್ ರಾಜಕೀಯಕ್ಕೆ.. ಕಿಚ್ಚ ಹೇಳಿದ್ದೇನು..? ಇಂದು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಇವತ್ತು ಮಾಧ್ಯಮಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ರಾಜಕೀಯಕ್ಕೆ ಬರುವ ಬಗ್ಗೆ ಮಾತನ್ನಾಡಿದರು.
ರಾಜಕಾರಣಕ್ಕೆ ಬರಬೇಕು ಅಂತೇನೂ ಇಲ್ಲ. ಕೆಲವೊಬ್ಬರು ಬರೋ ಥರಾ ಮಾಡುತ್ತಿದ್ದಾರೆ. ನೋಡೋಣ ಮುಂದೆ ಹೇಗೆ, ಏನು ಅಂತಾ? ಅನ್ನೋ ಮೂಲಕ ಅಡ್ಡಗೋಡೆ ಮೇಲೆ ದೀಪ ಇಟ್ಟರು.
ಗೊತ್ತಿಲ್ಲ! ಆ ರೀತಿಯ ಯೋಚನೆ ಏನೂ ಇಲ್ಲ. ಆದರೆ ಆವಾಗ ಆವಾಗ ಆ ರೀತಿಯ ಯೋಚನೆ ಬರುವ ಹಾಗೆ ಕೆಲವರು ಮಾಡುತ್ತಿರುತ್ತಾರೆ. ಅದಕ್ಕೆ ಅವರು ಯಾರು ಎಂದು ಕೇಳಲಾಯಿತು. ಪ್ರತಿಕ್ರಿಯಿಸಿದ ಸುದೀಪ್, ಯಾರೋ ಬಿಡಿ ಎಂದು ನಕ್ಕರು.
ನಂತರ ಮೊನ್ನೆಯ ದಿನ ಮೈಸೂರಲ್ಲಿ ವೇದಿಕೆ ಮೇಲೆ ಸಿದ್ದರಾಮಯ್ಯ ಕರೆದು ಮಾತನಾಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ.. ಇಲ್ಲ, ಸಿದ್ದರಾಮಯ್ಯ ಅವರು.. ಪಾಪ ಅವರಿಗೆ ಅವರದ್ದೇ ತಲೆನೋವು ತುಂಬಾನೇ ಇದೆ.
ನನ್ನನ್ನ ಯಾಕೆ ಅದಕ್ಕೆಲ್ಲ ಸೇರಿಸಿಕೊಳ್ಳಬೇಕು. ಸಿದ್ದರಾಮಯ್ಯರ ಅವರಿಗೆ ನಾನು ಮೊದಲೇ ಹೇಳಿದ್ದೇನೆ. ನನಗೆ ಅವರ ಮೇಲೆ ಅಪಾರ ಗೌರವ ಇದೆ. ಕಾರಣ ಏನು ಅಂದ್ರೆ, ನಾನು ಬೇರೆ ಯಾವ ಕೆಲಸಕ್ಕೂ ಅವರ ಬಳಿ ಹೋಗಿಲ್ಲ.
ಯಾವುದೋ ಚಿಕ್ಕ ಕಾರ್ಯಕ್ರಮ ಇರಲಿ. ಅದನ್ನು ಮಾಡಲು ಮುಂದೆ ನಿಂತಾಗ ಅಲ್ಲಿಗೆ ಬಂದು ಫ್ಲಾಗ್ ಹಾಸ್ಟ್ ಮಾಡಿಕೊಡ್ತಾರೆ.
ಯಾವಾಗ ಅವರ ಮನೆಗೆ ಹೋದಾಗ, ಕರೆದು ಗೌರವ ನೀಡುತ್ತಾರೆ. ಗೌರವ ಕೊಟ್ಟು ಮಾತನ್ನಾಡಿಸುತ್ತಾರೆ ಅಂದಾಗ ಆ ವ್ಯಕ್ತಿಯ ಮೇಲೆ ನನಗೆ ಗೌರವ ಇದೆ.
ನನಗೆ ಅವರು ವೈಯಕ್ತಿಕವಾಗಿ ಕೆಲಸ ಮಾಡಿಕೊಟ್ಟಿದ್ದಾರೆ ಅಂತಲ್ಲ. ಸಿಕ್ಕಾಗ ತುಂಬಾ ಪ್ರೀತಿಯಿಂದ ಮಾತನ್ನಾಡಿಸುತ್ತಾರೆ. ಅದನ್ನೇ ಮಾತಾಡ್ತೀವಿ..