
ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಅಚ್ಚರಿಯ ಅತಿಥಿ ಯಾರದು?
ಪ್ರತಿ ವರ್ಷ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಶೋ ಅಪೂರ್ಣವೆನಿಸುತ್ತದೆ.
ವಾಹಿನಿಯವರು ಕೂಡ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ.
ಈ ವರ್ಷದ ಬಿಗ್ ಬಾಸ್ ಕೂಡ ಇದರಿಂದ ಹೊರತಾಗಿರುವುದಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಎಲ್ಲಾ ಭಾಷೆಗಳಲ್ಲಿ…
ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ. ಸ್ಫರ್ಧಿಗಳ ಹುಡುಕಾಟ ಶುರುವಾಗಿದೆ. ಕೆಲವರ ಹೆಸರು ಕೂಡ ಚಾಲ್ತಿಯಲ್ಲಿರವೆ.
ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಅಚ್ಚರಿಯ ಅತಿಥಿ ಯಾರದು?
ಆ ಪೈಕಿ ಹಿಂದಿ ಬಿಗ್ ಬಾಸ್ ನ ಕೆಲಸಗಳು ಬೇರೆ ಎಲ್ಲಾ ಭಾಷೆಗಳಿಗೆ ಹೋಲಿಸಿದರೆ ತುಸು ಬಿರುಸಿನಿಂದ ನಡೆಯುತ್ತಿದ್ದು,
ಹಿಂದಿ ಯೂಟ್ಯೂಬರ್ ಗೌತಮ್ ತನೇಜಾ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ, ಕೃಷ್ಣಾ ಶ್ರಾಫ್, ಮಿಕ್ಕಿ ಮೇಕ್ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್, ಮಮತಾ ಕುಲಕರ್ಣಿ, ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.
ಇದರ ನಡುವೆ ಇದೀಗ ಇದೇ ಮೊದಲ ಬಾರಿ ಬಿಗ್ ಬಾಸ್ ಇತಿಹಾಸದಲ್ಲಿ ರೊಬೋಟ್ ಸ್ಫರ್ದಿಯಾಗಿ ಮನೆ ಪ್ರವೇಶಿಸಲಿದೆ ಎನ್ನುವ ಸುದ್ದಿ ಸದ್ಯ ಗುಲ್ಲಾಗಿದೆ.
ಹೌದು, ಅಸಲಿಗೆ ಬಿಗ್ ಬಾಸ್ ಸೀಸನ್ 16ರಲ್ಲಿ ತಜಕಿಸ್ತಾನದ ಗಾಯಕ, ಸಂಗೀತ ನಿರ್ದೇಶಕ, ಬ್ಲಾಗರ್ ಕೂಡ ಆಗಿದ್ದ ವಿಶ್ವದ ಅತ್ಯಂತ ಪುಟ್ಟ ಗಾಯಕ ಎಂಬ ದಾಖಲೆಯನ್ನು ಕೂಡ ಹೊಂದಿರುವ ಅಬ್ದು ರೋಜಿಕ್ ಭಾಗವಹಿಸಿದ್ದರು.
ಸದ್ಯ ಇದೇ ಅಬ್ದು ರೋಜಿಕ್ ಅವರ ಯುಎಇ ಕಂಪನಿಯಾದ ‘ಐಎಫ್‌ಸಿಎಂ’ನಲ್ಲಿ ಹಬುಬ್ ಡಾಲ್ ಎಂಬ ಎಐ ರೋಬೋಟ್ ಕಾರ್ಯ ನಿರ್ವಹಿಸುತ್ತಿದ್ದು,
ಇದೇ ಹಬುಬ್ ಡಾಲ್ ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದೆ ಎಂದು ”ಡೇಲಿ ಜಾಗರಣ್” ಸೇರಿ ಅನೇಕ ಪತ್ರಿಕೆ ಮತ್ತು ವೆಬ್ ಸೈಟ್‌ಗಳು ವರದಿಯನ್ನು ಮಾಡಿವೆ.
ಬಿಗ್ ಬಾಸ್ ಮನೆಗೆ ಬರುವ ಈ ಡಾಲ್ ಹಿಂದಿ ಸೇರಿ 7 ಭಾಷೆಗಳನ್ನು ಮಾತನಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿವೆ.
ಅಂದ್ಹಾಗೇ ಈ ಹಿಂದೆ ಹಿಂದಿ ಬಿಗ್ ಬಾಸ್ ಮನೆಯಲ್ಲಿ ಕತ್ತೆಯನ್ನು ಬಿಡಲಾಗಿತ್ತು. ಈ ಮೂಲಕ ವಿಶಿಷ್ಠವಾದ ಪ್ರಯತ್ನವನ್ನು ಕೂಡ ಮಾಡಲಾಗಿತ್ತು.
ಈ ಹಿನ್ನೆಲೆ ಈ ಬಾರಿ ವರದಿಯಾದಂತೆ ಎಐ ರೋಬೋಟ್ ಕಳಿಹಿಸಿದರು ಅಚ್ಚರಿ ಇಲ್ಲ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಹಾಗೊಂದು ವೇಳೆ ಎಐ ರೋಬೋಟ್ ಮನೆಯೊಳಗೆ ಹೋದರೆ ಏನೆಲ್ಲ ಆಗಬಹುದು ಎನ್ನುವ ಪ್ರಶ್ನೆ ಸದ್ಯ ಅನೇಕರನ್ನು ಕಾಡುತ್ತಿದೆ.
ಇನ್ನುಳಿದಂತೆ ಸದ್ಯ ಪ್ರತಿ ಬಾರಿ ಎಲ್ಲ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಒಂದೆರಡು ವಾರದ ನಂತರ ಶುರುವಾಗುತ್ತಿದ್ದ ಹಿಂದಿಯ ಬಿಗ್ ಬಾಸ್ ಈ ಬಾರಿ ಬೇರೆ ಎಲ್ಲ ಭಾಷೆಗಳಿಗಿಂತ ಮೊದಲು ಶುರುವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಈ ಬಾರಿ ಬಿಗ್ ಬಾಸ್ ಜುಲೈ 30 ಅಲ್ಲ ಬದಲಿಗೆ ಆಗಸ್ಟ್ 3ರಿಂದ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಬಾರಿ ಹಿಂದಿ ಬಿಗ್ ಬಾಸ್ ಮೂರಲ್ಲ ಬದಲಿಗೆ ಐದೂವರೆ ತಿಂಗಳು ನಡೆಯಲಿದೆ.
ಈ ಮೂಲಕ ಕಿರುತೆರೆಯ ಇತಿಹಾಸದಲ್ಲಿ ಹೊಸದೊಂದು ಕ್ರಾಂತಿಯನ್ನು ಮಾಡಲು ಆಯೋಜಕರು ಮುಂದಾಗಿದ್ದಾರೆ ಎಂದು ‘ಪಿಂಕ್‌ವಿಲ್ಲಾ’ ಈ ಹಿಂದೆ ವರದಿ ಮಾಡಿದ್ದು,
ಬಿಗ್ ಬಾಸ್ ಕಾರ್ಯಕ್ರಮ ಈ ಸಲ ಮೂರಲ್ಲ ಬದಲಿಗೆ ಐದೂವರೆ ತಿಂಗಳು ನಡೆಯಲಿದೆ ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಜುಲೈ ಅಂತ್ಯಕ್ಕೆ ಹಿಂದಿ ಬಿಗ್ ಬಾಸ್ ಪ್ರೋಮೋ ಬಿಡುಗಡೆಯಾಗುವ ಸಾಧ್ಯತೆ ಇದ್ದು ಈಗಾಗಲೇ ಹಿಂದಿ ವಲಯದಲ್ಲಿ ಬಿಗ್ ಬಾಸ್ ನೋಡಲು ಪ್ರೇಕ್ಷಕರ ವರ್ಗ ಕಾತುರದಿಂದ ಕಾಯುತ್ತಿದೆ ಎಂದು ಕೂಡ ವರದಿಯಾಗಿದೆ.
Eoe