Youtubers: ಯೂಟ್ಯೂಬರ್ಗಳಿಗೆ ಪರಮೇಶ್ವರ್ ಖಡಕ್ ವಾರ್ನಿಂಗ್! ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಅನಾಮಿಕನೊಬ್ಬನ ಆರೋಪ ಸದ್ಯ ಭಾರೀ ಸಂಚಲನ ಸೃಷ್ಟಿಸಿದೆ.
ಇದೀಗ ಧರ್ಮಸ್ಥಳ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದೆ.
ವಿಧಾನಸಭೆ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ (Dharmasthala Case), ಎಸ್ಐಟಿ ರಚನೆ, ತನಿಖೆ ಬಗೆಗಿನ ವಿಚಾರ ಮುನ್ನೆಲೆಗೆ ಬಂದಿದ್ದು, ವಿಪಕ್ಷಗಳ ಪ್ರಶ್ನೆಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರು ಎಸ್ಐಟಿ ತನಿಖೆ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಆ ಬಳಿಕ ಸದನದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ವಿಪಕ್ಷ ನಾಯಕ ಆರ್ ಅಶೋಕ್ (Harish Poonja, R Ashok) ಸೇರಿ ಹಲವರು ಈ ಪ್ರಕರಣ ಸಂಬಂಧ ಅಪಪ್ರಚಾರಗಳನ್ನು ಮಾಡುತ್ತಿರುವ ಯೂಟ್ಯೂಬರ್ಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಯೂಟ್ಯೂಬರ್ಸ್ ಅಪಪ್ರಚಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ವಿಪಕ್ಷ ನಾಯಕರು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಗೃಹ ಸಚಿವ ಜಿ ಪರಮೇಶ್ವರ್ ಸದನದಲ್ಲೇ ಯೂಟ್ಯೂಬರ್ಸ್ಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಯೂಟ್ಯೂಬರ್ಸ್ಗಳಿಗೆ ಖಡಕ್ ವಾರ್ನಿಂಗ್
ವ್ಯಕ್ತಿ, ಸಂಸ್ಥೆ, ಸರ್ಕಾರದ ಬಗ್ಗೆ ಯೂಟ್ಯೂಬರ್ಸ್ ಮಾತಾಡ್ತಾರೆ. ಅದನ್ನ ನಾವು ಕೂಡಾ ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕಾಗುತ್ತದೆ.
ಇಲ್ಲವಾದರೆ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು. ಯೂಟ್ಯೂಬರ್ಸ್ ಇಲ್ಲಿಗೆ ಸ್ಟಾಪ್ ಮಾಡಿ, ಇಲ್ಲವಾದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ! ಎಂದು ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಶವಶೋಧ ಸ್ಥಗಿತ
ವಿಧಾನಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಹಲವು ಹೇಳಿಕೆಗಳ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಪರಮೇಶ್ವರ್, ಇನ್ನು ಎಷ್ಟು ಕಡೆ ಅಗೆಯುತ್ತೀರಿ ಎಂದು ಕೇಳ್ತಾ ಇದ್ದಾರೆ. ಅವರನು ಪೂರ್ತಿ ಧರ್ಮಸ್ಥಳ ತೋರಿಸಿದರೆ ಅಗೆಯಲು ಸಾಧ್ಯವಿಲ್ಲ, ಮುಂದೆ ಅಗೆಯಬೇಕೊ ಬೇಡವೊ ತಿರ್ಮಾನ ಎಸ್ಐಟಿ ಮಾಡುತ್ತದೆ.
ನಾವು ಹೇಳೋದಿಲ್ಲ, ಏನು ಮಾಡಬೇಕು ಎಂದು ಎಸ್ಐಟಿ ಮಾಡುತ್ತದೆ ಎಂದು ಹೇಳಿದ್ದಾರೆ. ಇನ್ನು ಡಿಎನ್ಎ ಮ್ಯಾಚ್ ಮಾಡಿ,
ಅದು ಮನುಷ್ಯರ ಹೆಣ ಎಂದು ಮ್ಯಾಚ್ ಆಗದೇ ಹೋದರೆ ಮತ್ತು ಮ್ಯಾಚ್ ಆಗ್ತಿದೆಯಾ ಎಂದು ರಿಸಲ್ಟ್ ಬರುವ ತನಕ ಗುಂಡಿಗಳನ್ನು ಅಗೆಯದೇ ಇರಲು ತಿರ್ಮಾನ ಮಾಡಿದೆ ಎಂದು ವಿಧಾನಸಭೆಯಲ್ಲಿ ಗೃಹಸಚಿವ ಜಿ ಪರಮೇಶ್ವರ್ ಮಾಹಿತಿ ನೀಡಿದ್ದಾರೆ.