ಮಂಡ್ಯ: 2 ತಿಂಗಳ ಹಿಂದೆ ಪ್ರೀತಿಸಿ ಮದುವೆ.. ಈಗ ಜೀವ ಕಳೆದುಕೊಂಡ ಯುವತಿ, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಗಂಡನೇ ಕಾರಣ ಎಂದು ಯುವತಿ ಕಡೆಯವರು ಆರೋಪ ಮಾಡಿದ್ದಾರೆ.
ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಪೂಜಾ (25) ನೇಣು ಬಿಗಿದುಕೊಂಡು ಜೀವ ಬಿಟ್ಟವರು. ಪೂಜಾ ಹಾಗೂ ಕೆನ್ನಾಳು ಗ್ರಾಮದ ಅಭಿನಂದನ್ ಪ್ರೀತಿಸುತ್ತಿದ್ದರು.
ಹೀಗಾಗಿ ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು. ಎರಡು ತಿಂಗಳ ಹಿಂದಷ್ಟೇ ಈ ಇಬ್ಬರು ಮದುವೆಯಾಗಿದ್ದರು. ಆದರೆ ಮದುವೆ ಬಳಿಕ ಗಂಡನ ಮನೆಯವರಿಂದ ಕಿರುಕುಳ ಆರೋಪವನ್ನು ಯುವತಿ ಕಡೆಯವರು ಮಾಡಿದ್ದಾರೆ.