1766 ಪುಟಗಳ ಮೀಸಲಾತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ! ಬಹುನಿರೀಕ್ಷಿತ ಒಳ ಮೀಸಲಾತಿ (Internal Reservation) ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನ್ ದಾಸ್ (Justice Nagamohan Das) ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯಗೆ 1,766 ಪುಟಗಳ ವರದಿ ಸಲ್ಲಿಕೆ ಮಾಡಿದ್ದಾರೆ
ಬಳಿಕ ಪ್ರತಿಕ್ರಿಯೆ ನೀಡಿದ ನ್ಯಾ.ನಾಗಮೋಹನ್ ದಾಸ್, ನಮ್ಮ ಆಯೋಗ ಮೊದಲು ಮಧ್ಯಂತರ ವರದಿ ಕೊಟ್ಟಿತ್ತು. ಆದಾದ ಬಳಿಕ ಸಮೀಕ್ಷೆ ಮಾಡಲು ಕ್ಯಾಬಿನೆಟ್ (Cabinet) ಒಪ್ಪಿಗೆ ಕೊಟ್ಟಿತ್ತು. 60 ದಿನ ಸಮೀಕ್ಷೆ ಮಾಡಿದ್ದೇವೆ.
ಮೊಬೈಲ್ ಆಪ್ ಬಳಸಿ ಸಮೀಕ್ಷೆ ಮಾಡಲಾಗಿದೆ. 27 ಲಕ್ಷಕ್ಕೂ ಹೆಚ್ಚು ಕುಟುಂಬಗಳು 1.07 ಕೋಟಿಗೂ ಹೆಚ್ಚು ಜನರ ಸಮೀಕ್ಷೆ ಮಾಡಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಒಳ ಮೀಸಲಾತಿ ರಿಪೋರ್ಟ್ ಕೊಟ್ಟಿದ್ದಾರೆ. ಆಗಸ್ಟ್ 7ರಂದು ನಡೆಯುವ ಕ್ಯಾಬಿನೆಟ್ನಲ್ಲಿ ವರದಿ ಮಂಡಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.
ಯಾರೂ ಆರೋಪ ಮಾಡಿಲ್ಲ. ಸಮಿಕ್ಷೆಯನ್ನ, ವರದಿಯನ್ನು ಯಾರೂ ವಿರೋಧ ಮಾಡಿಲ್ಲ ಎಂದು ಹೇಳಿದರು.