ಹಾವೇರಿ| ಬರ್ತ್ಡೇ ದಿನವೇ ಕಾಂಗ್ರೆಸ್ ಯುವ ಕಾರ್ಯಕರ್ತನ ಹತ್ಯೆಯಾಗಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಮನೋಜ್ ಪ್ರಕಾಶ್ ಉಡಗಣ (28) ಹತ್ಯೆಯಾದ ಯುವಕ.
ಮನೋಜ್ಗೆ ಕಂಠಪೂರ್ತಿ ಮದ್ಯ ಕುಡಿಸಿ, ವರದಾ ನದಿ ಬ್ರಿಡ್ಜ್ ಮೇಲಿಂದ ಆರೋಪಿಗಳು ನೂಕಿ ಹತ್ಯೆ ಮಾಡಿದ್ದಾರೆನ್ನಲಾಗಿದೆ
ನನ್ನ ಸಹೋದರನನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ್ದಾರೆಂದು ಕೆಲವರ ವಿರುದ್ಧ ಮೃತ ಮನೋಜ್ನ ಸಹೋದರ ಶಂಭು ಗಂಭೀರ ಆರೋಪ ಮಾಡಿದ್ದಾರೆ.
ಮದುವೆಯಾದ ಗೃಹಿಣಿಗೆ ಮೆಸೇಜ್ ಮಾಡುತ್ತಿದ್ದ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮನೋಜ್, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆಗೆ ಬೇರೊಬ್ಬರ ಜೊತೆ ಮದುವೆಯಾಯಿತು. ಆದರೂ, ಮನೋಜ್ ಆಕೆಗೆ ಮೆಸೇಜ್ ಮಾಡುತ್ತಿದ್ದ.
ಇದರಿಂದ ಆಕೆಯ ಪತಿ ಕೋಪಗೊಂಡು ಕಾಂಗ್ರೆಸ್ ಯುವ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ