ಪ್ರಧಾನಿ ಮೋದಿಯವರು ಆಪರೇಷನ್ ಸಿಂದೂರ್ ಸಮಯದಲ್ಲಿ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು ಎಂದು ಒತ್ತಿ ಹೇಳಿದರು.
ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ನಾಶಮಾಡಲಾಗಿದೆ ಮತ್ತು ಪಾಕಿಸ್ತಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಆಪರೇಷನ್ ಸಿಂದೂರ್ ಸಮಯದಲ್ಲಿ “ಸಶಸ್ತ್ರ ಪಡೆಗಳಿಗೆ ಕಾರ್ಯಾಚರಣೆ ಮತ್ತು ಕುಶಲತೆಯ ಸ್ವಾತಂತ್ರ್ಯ” ಇರಲಿಲ್ಲ ಎಂಬ ರಾಹುಲ್ ಗಾಂಧಿಯವರ ಟೀಕೆಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ
ಸರ್ಕಾರ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿತು. ಇದರಿಂದಲೇ ಪಾಕಿಸ್ತಾನಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಒತ್ತಿ ಹೇಳಿದರು.
ಪ್ರಧಾನಿಯವರ ಭಾಷಣದ ಪ್ರಮುಖ ಅಂಶಗಳು:
- ನಮ್ಮ ಸೇನಾಪಡೆಯ ಬಗ್ಗೆ ನನಗೆ ಹೆಮ್ಮೆ ಇದೆ. ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಯಾವಾಗ, ಎಲ್ಲಿ ಮತ್ತು ಹೇಗೆ ಕಾರ್ಯಾಚರಣೆ ಮಾಡಬೇಕು ಎನ್ನುವ ಬಗ್ಗೆ ಅವರಿಗೆ ನಿರ್ಧಾರ ಮಾಡಲು ತಿಳಿಸಲಾಗಿತ್ತು. ಅವರಿಗೆ ನಾವು ಕಠಿಣ ಪಾಠ ಕಲಿಸಿದ್ದೇವೆ. ಇಂದಿಗೂ ಕೂಡ ಅವರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
- ನಾವು ಪಾಕಿಸ್ತಾನದೊಂದಿಗೆ ಹಲವಾರು ಬಾರಿ ಹೋರಾಡಿದ್ದೇವೆ, ಆದರೆ ಭಾರತದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಪ್ರತಿಯೊಂದು ಮೂಲೆಯಲ್ಲಿಯೂ ಭಯೋತ್ಪಾದಕ ಕೇಂದ್ರಗಳನ್ನು ನಾಶಮಾಡಿದ್ದು ಇದೇ ಮೊದಲು. ಅಲ್ಲಿ ಕೂಡ ಭಾರತ ದಾಳಿ ಮಾಡಬಹುದು ಎಂದು ಯಾರೂ ಭಾವಿಸಿರಲಿಲ್ಲ.ನಮ್ಮ ಪಡೆಗಳು ಭಯೋತ್ಪಾದಕ ಕೇಂದ್ರಗಳನ್ನು ನಿರ್ಮೂಲ ಮಾಡಿವೆ.
- ಪರಮಾಣು ಬ್ಲ್ಯಾಕ್ಮೇಲಿಂಗ್ ಕೆಲಸ ಮಾಡುವುದಿಲ್ಲ ಮತ್ತು ನಾವು ಅದಕ್ಕೆ ಹೆದರುವುದಿಲ್ಲ ಎಂದು ಸಾಬೀತುಪಡಿಸಿದ್ದೇವೆ. ಪಾಕಿಸ್ತಾನದ ಹೃದಯಭಾಗದಲ್ಲಿ ದಾಳಿ ಮಾಡುವ ಮೂಲಕ, ಅವರ ವಾಯುನೆಲೆಗಳು ಮತ್ತು ಆಸ್ತಿಗಳನ್ನು ಹೊಡೆಯುವ ಮೂಲಕ ಭಾರತ ತನ್ನ ತಾಂತ್ರಿಕ ಪರಾಕ್ರಮವನ್ನು ತೋರಿಸಿದೆ. ಈ ವಾಯುನೆಲೆಗಳಲ್ಲಿ ಕೆಲವು ಇನ್ನೂ ಐಸಿಯುನಲ್ಲಿವೆ.
- ಭಾರತ ತನ್ನ ಕಾರ್ಯಾಚರಣೆ ನಡೆಸುವುದನ್ನು ಯಾವುದೇ ದೇಶ ತಡೆಯಲಿಲ್ಲ. ಕೇವಲ 3 ರಾಷ್ಟ್ರಗಳು ಮಾತ್ರ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿವೆ. ನಮಗೆ ವಿಶ್ವದ ಬೆಂಬಲ ಸಿಕ್ಕಿತು ಆದರೆ ಕಾಂಗ್ರೆಸ್ ನಮಗೆ ಬೆಂಬಲ ನೀಡದಿರುವುದು ತುಂಬಾ ದುರದೃಷ್ಟಕರ.