ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋ (Namma Metro) ಗುಡ್ ನ್ಯೂಸ್ ಕೊಟ್ಟಿದ್ದು, ಆಗಸ್ಟ್ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಲಕ್ಷಾಂತರ ಜನ ಐಟಿ-ಬಿಟಿ ಉದ್ಯೋಗಿಗಳ ಕನಸಿನ ಯೋಜನೆಯಾದ ಹಳದಿ ಮಾರ್ಗ ಮೆಟ್ರೋ ಉದ್ಘಾಟನೆಗೆ ಕಾಲ ಸಮೀಪಿಸುತ್ತಿದೆ.
ಮಂಗಳವಾರ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡದಿಂದ ಆರ್ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ನಿಲ್ದಾಣದಲ್ಲಿ ತಪಾಸಣೆ ನಡೆಸಿದ್ದು, ಜು.25ರವರೆಗೆ ಪರಿಶೀಲನೆ ಮುಂದುವರಿಯಲಿದೆ.

ಹೀಗಾಗಿ ಆಗಸ್ಟ್ನಲ್ಲಿ ಯೆಲ್ಲೋ ಲೈನ್ ಉದ್ಘಾಟನೆ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.