ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್ ಜಾರಿ: ಪರಮೇಶ್ವರ್! ಸಾರ್ವಜನಿಕರ ಪರ ವಿರೋಧದ ಚರ್ಚೆ ನಡುವೆ ನಗರದಲ್ಲಿ ಮತ್ತೆ ವಾಹನಗಳ ಟೋಯಿಂಗ್ ವ್ಯವಸ್ಥೆ ಜಾರಿ ಆಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಗರದಲ್ಲಿ ಸುದ್ದಿಗಾರರ ಮಾಧ್ಯಮದವರ ಜೊತೆ ಅವರು ಮಾತಾಡಿದರು. ಈ ವೇಳೆ, ಆಗಸ್ಟ್ ಅಂತ್ಯಕ್ಕೆ ಮತ್ತೆ ಟೋಯಿಂಗ್ ಆರಂಭಿಸ್ತೇವೆ.
ಇಲಾಖೆಯಿಂದಲೇ ಟೋಯಿಂಗ್ ಮಾಡಲಾಗುವುದು, ಅದಕ್ಕಾಗಿ ಖಾಸಗಿಯವರಿಗೆ ಗುತ್ತಿಗೆ ಕೊಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಸ್ತೆಗಳಲ್ಲಿ ನಿಯಮ ಮೀರಿ ನಿಲ್ಲಿಸುವ ವಾಹನಗಳ ಪಾರ್ಕಿಂಗ್ ತಲೆನೋವಾಗಿದ್ದು, ಟೋಯಿಂಗ್ ವೇಳೆ ಟ್ರಾಫಿಕ್ ಪೊಲೀಸರಿಗೆ ಜನರ ಜತೆ ಮಾನವೀಯತೆಯಿಂದ, ಶಾಂತಿಯಿಂದ ವರ್ತಿಸಲು ಸೂಚಿಸಿದ್ದೇವೆ.
ಈಗಾಗಲೇ ಟ್ರಾಫಿಕ್ ಪೊಲೀಸ್ ವಿಭಾಗ ಟೋಯಿಂಗ್ ಮಾಡುವ ವಾಹನಗಳಿಗಾಗಿ ಬಿಬಿಎಂಪಿಗೆ ಮನವಿ ಸಲ್ಲಿಸಿದೆ.
ನಗರದಲ್ಲಿ 49 ಸಂಚಾರ ಪೊಲೀಸ್ ಠಾಣೆಗಳಿದ್ದು, 10 ಸಂಚಾರ ಉಪ ವಿಭಾಗಗಳಿಗೆ ತಲಾ ಒಂದರಂತೆ ಟೋಯಿಂಗ್ ವಾಹನ ನಿಯೋಜಿಸಲು ಉದ್ದೇಶಿಸಲಾಗಿದೆ.
ನಗರದಲ್ಲಿ ಪ್ರತಿನಿತ್ಯ ಸರಾಸರಿ 2,300 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ.
ವಾಹನಗಳ ಸಂಖ್ಯೆಯು 1.25 ಕೋಟಿಯ ಗಡಿ ದಾಟಿದೆ. ವಾಹನಗಳ ನಿರ್ಬಂಧಿತ ಸ್ಥಳಗಳಲ್ಲಿ ನಿಲ್ಲಿಸುವುದನ್ನು ತಡೆಯಲು ಟೋಯಿಂಗ್ ಮರುಜಾರಿಯಾಗ್ತಿದೆ.
ಬಿಜೆಪಿ ಅವಧಿಯಲ್ಲಿ ಟೋಯಿಂಗ್ ವ್ಯವಸ್ಥೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ಬಂದು ಸ್ಥಗಿತ ಮಾಡಲಾಗಿತ್ತು ಎಂದಿದ್ದಾರೆ.