ಹಾವುಗಳ ಬಗ್ಗೆ ಜಾಗರೂಕರಾಗಿರಲು ಅವರು ಸಲಹೆ ನೀಡಿದ್ದಾರೆ. ಮನೆಗಳು ಹಾವುಗಳು ಬಂದಾಗ ತಜ್ಞರನ್ನು ಕರೆಸಿ ಅವುಗಳನ್ನು ಹಿಡಿಯಬೇಕು ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸೋನು ಸೂದ್ ಅವರು ಹಾವೊಂದನ್ನು ಬರಿಗೈಯಲ್ಲಿಯೇ ರಕ್ಷಣೆ ಮಾಡಿದ್ದಾರೆ. ಸೋನು ಸೂದ್ ತಮ್ಮ ಮನೆಯ ಬಳಿ ಬಂದ ಹಾವನ್ನು ಎಚ್ಚರಿಕೆಯಿಂದ ಚೀಲದೊಳಗೆ ಇರಿಸಿದ್ದಾರೆ.
ಇದಕ್ಕಿದ್ದಂತೆ ತಮ್ಮ ಅಪಾರ್ಟ್ ಮೆಂಟ್ ಆವರಣದೊಳಗೆ ಪ್ರವೇಶಿಸಿದ ವಿಷ ರಹಿತ ಕೇರೆ ಹಾವನ್ನು ಸೋನು ಸೂದ್ ಬರಿಗೈಯಲ್ಲಿಯೇ ರಕ್ಷಿಸಿದ್ದು, ತದನಂತರ ಅದನ್ನು ನಂತರ ತಮ್ಮ ಬಳಿ ಕೆಲಸ ಮಾಡುತ್ತಿರುವ ಯುವಕರಿಗೆ ಹಾವನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರಲು ಸೂಚಿಸಿದ್ದಾರೆ.
ಹಾವುಗಳ ಬಗ್ಗೆ ಜಾಗರೂಕರಾಗಿರಲು ಅವರು ಸಲಹೆ ನೀಡಿದ್ದಾರೆ. ಮನೆಗಳು ಹಾವುಗಳು ಬಂದಾಗ ತಜ್ಞರನ್ನು ಕರೆಸಿ ಅವುಗಳನ್ನು ಹಿಡಿಯಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್ ಧನಕರ್!