ಪ್ರಿಯಕರನ ಜೀವ ತೆಗೆದಿದ್ದಕ್ಕೆ ಸಿಟ್ಟಿಗೆದ್ದ ನಾಗಿಣಿ.. 

SNAKE

ಹಾವಿನ ದ್ವೇಷ 12 ವರುಷ ಎಂಬುದನ್ನು ಕೇಳಿರುತ್ತೇವೆ. ಆದರೆ ನಮ್ಮ ಗಮನಕ್ಕೆ ಬರುವವರೆಗೂ ಇದು ಸುಳ್ಳಿರಬಹುದು ಎಂದೇ ಎನಿಸುತ್ತಿರುತ್ತದೆ. ಆದರೆ ಸತ್ಯ ಕಣ್ಣೆದುರೇ ಇದ್ದಾಗ ನಂಬಲೇಬೇಕಾಗುತ್ತದೆ.

ತನ್ನ ಸಂಗಾತಿನ ಕೊಂದ ಮನೆಗೆ ನುಗ್ಗಿ ಹೆಣ್ಣು ಹಾವೊಂದು ಪ್ರತೀಕಾರ ತೀರಿಸಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಮಥುರಾದಲ್ಲಿ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮಥುರಾದ ಸಿಹೋರಾ ಗ್ರಾಮದ ನಿವಾಸಿ ಮನೋಜ್ ಅವರ ಪತ್ನಿ ಕಳೆದ ತಿಂಗಳಷ್ಟೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ಜುಲೈ 2ರಂದು ನಾಮಕರಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಕರೆಲ್ಲಾ ಮನೆಗೆ ಬಂದಿದ್ದರು. ಹಾಗೆಯೇ ಮನೋಜ್ ಅವರ ಪತ್ನಿಯ ಸಹೋದರ ಸಚಿನ್ ಕೂಡ ಅಲ್ಲಿಗೆ ಬಂದಿದ್ದರು.

ಮನೆಯ ಒಳಗೆ ಕೋಣೆಯಲ್ಲಿ ಹಾವು ಇರುವುದನ್ನು ಕಂಡು ಬೆಚ್ಚಿಬಿದ್ದ ಸಚಿನ್ ಕೂಡಲೇ ದೊಣ್ಣೆಯಿಂದ ಗಂಡು ಹಾವನ್ನು ಹೊಡೆದು ಜೀವ ತೆಗೆದಿದ್ದ.

ಬಳಿಕ ಕೆಲವೇ ದಿನಗಳಲ್ಲಿ ಆ ಗಂಡು ಹಾವಿನ ಸಂಗಾತಿ ಮೂವರಿಗೆ ಕಚ್ಚಿ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮನೋಜ್ ಜೀವಂತವಾಗಿಲ್ಲ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೋಜ್ ಕುಟುಂಬಸ್ಥರು ಗಂಡು ಹಾವಿನ ಸಂಗಾತಿ ತಮ್ಮ ಮೇಲೆ ರೀವೆಂಜ್ ತೆಗೆದುಕೊಳ್ಳುತ್ತಿದೆ ಎಂದೇ ಭಾವಿಸಿದ್ದಾರೆ. ಜೊತೆಗೆ ಸಾವನ್ನಪ್ಪಿದ ಹಾವಿನ ಸಂಗಾತಿ, ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿದೆ ಎಂಬ ಭಯ ಬಂದಿದೆ. ಈಗ ಒಂದೆಡೆ ಮನೋಜ್ ಕುಟುಂಬಕ್ಕೆ ಹಾವು ಕಡಿತದ ಭಯ, ಭೀತಿ ಕಾಡುತ್ತಿದೆ.

ಮತ್ತೊಂದೆಡೆ ಹಾವು ಹೊಡೆದು ಸಾಯಿಸಿದ ಸಚಿನ್ ಕೂಡ ಜೀವ ಭಯದಲ್ಲಿದ್ದಾನೆ.

ಮನೋಜ್ ಕುಟುಂಬದವರಾರು ಕೂಡ ಈಗ ಮನೆಯ ಒಳಗೆ ರಾತ್ರಿ ವೇಳೆ ಮಲಗುತ್ತಿಲ್ಲ. ರಾತ್ರಿ ವೇಳೆ ಮನೆಯ ಹೊರಗೆ ಮಲಗುತ್ತಿದ್ದಾರೆ. ಹೆಣ್ಣು ಹಾವು ಬೇರೆಯವರನ್ನು ಟಾರ್ಗೆಟ್ ಮಾಡಬಹುದು ಎಂಬ ಭಯ, ಭೀತಿಯಲ್ಲೇ ಮನೋಜ್ ಕುಟುಂಬ, ಸಚಿನ್ ಇದ್ದಾರೆ.

ಇನ್ನೂ ಸಿಹೋರಾ ಗ್ರಾಮಸ್ಥರು ಕೂಡ ಹಾವಿನ ದ್ವೇಷದ ಈ ಘಟನೆಯಿಂದ ಅಶ್ಟರ್ಯ ಚಕಿತರಾಗಿದ್ದಾರೆ. ಹಾವಿನ ದ್ವೇಷದ ಕಥೆಗಳನ್ನು ಜನರು ಕೇಳಿದ್ದರು. ಹಾಗಾಗಿ ಈಗ ಹಾವಿನ ದ್ವೇಷದ ಕಥೆಗೂ ಈ ನಿಜ ಘಟನೆಗೂ ಲಿಂಕ್ ಮಾಡುತ್ತಿದ್ದಾರೆ. ಗಂಡು ಹಾವಿನ ಸಂಗಾತಿ ಹಾವು, ಸೇಡು ತೀರಿಸಿಕೊಳ್ಳುತ್ತಿದೆ ಎಂದೇ ಜನರು ಹೇಳುತ್ತಿದ್ದಾರೆ.

TWITTER

Leave a Reply

Your email address will not be published. Required fields are marked *