ಪ್ರಥಮ್ ವಿಚಾರದಲ್ಲಿ ನಾನು ದರ್ಶನ್ ಸರ್ ಪರ ನಿಲ್ತೀನಿ: ಧ್ರುವ ಸರ್ಜಾ! ನಟ ಬಿಗ್ಬಾಸ್ ಪ್ರಥಮ್ ಅವರು ಇತ್ತೀಚೆಗೆ ದರ್ಶನ್ ಅಭಿಮಾನಿಗಳ ಬಗ್ಗೆ ಮಾತನಾಡಿ, ನಟಿ ರಮ್ಯಾಗೆ ಸಪೋರ್ಟ್ ಮಾಡಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ನಟ ಇತ್ತೀಚೆಗೆ ದರ್ಶನ್ ಅಭಿಮಾನಿಗಳ ವಿರುದ್ಧ ಹರಿಹಾಯ್ದಾಗ ತಮ್ಮ ಮೇಲೆ ನಡೆದಂತಹ ಒಂದು ದಾಳಿ ಘಟನೆಯ ಬಗ್ಗೆಯೂ ಮಾತನಾಡಿದ್ದರು.
ಇದೀಗ ಈ ವಿಚಾರವಾಗಿ ಧ್ರುವ ಸರ್ಜಾ (Dhruva Sarja) ಅವರು ದರ್ಶನ್ ಪರ ನಿಂತು ಮಾತನಾಡಿದ್ದಾರೆ.
ಈ ಬಗ್ಗೆ ನಟ ಮಾತನಾಡಿ, ರಮ್ಯಾ ಅವರು ತಮ್ಮ ಅಭಿಪ್ರಾಯವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ನಂತರ ಕಂಪ್ಲೇಟ್ ಕೊಟ್ಟರು.
ಅದೆಲ್ಲ ಕೇಳಿಯೇ ಬೇಸರವಾಯ್ತು. ನಾವೆಲ್ಲರೂ ರಮ್ಯಾ ಅವರ ಪರ ನಿಲ್ಲುತ್ತೇವೆ ಎಂದು ಹೇಳಲು ಇಷ್ಟ ಪಡ್ತೇನೆ.
ಎರಡನೇದಾಗಿ ಪ್ರಥಮ್ ಹಾಗೇ ಅವರ ನಡವಳಿಕೆ. ಈ ವಿಷಯದಲ್ಲಿ ದರ್ಶನ್ ಪರ ನಿಲ್ಲುತ್ತೇನೆ.
ರಮ್ಯಾ ಅವರಿಗೆ ಒಪಿನಿಯನ್ ಹೇಳುವ ಅವಕಾಶವಿದೆ. ಅವರಿಗೆ ಹಾಕಿದ ಮೆಸೇಜ್ ತಪ್ಪು. ಪ್ರಥಮ್ ಗೆ ಡ್ರಾಗನ್ ತೋರಿಸಿದ್ದರು ನಿಜ ಆದ್ರೆ. ಪ್ರಥಮ್ ದು ತಪ್ಪು ಇದೆ ಅನ್ಸುತ್ತೆ.
ಲಾಯರ್ ಜಗದೀಶ್ ಕಂಪ್ಲೇಂಟ್ ಕೊಡು ಅಂದ್ರು ಪ್ರಥಮ್ ಕೊಡಲಿಲ್ಲ.
ಪ್ರಥಮ್ ಮಾತಿನ ಮೇಲೆ ಹಿಡಿತವಿಲ್ಲಾ
ಎಲ್ಲೋ ಒಂದು ಕಡೆ ಪ್ರಥಮ್ ತಪ್ಪಿದೆ ಮಾತಿನ ಮೇಲೆ. ಮಾತಿನ ಮೇಲೆ ಹಿಡಿತವಿಲ್ಲಾ.
ಎಲ್ಲರೂ ಅವರಿಗೆ ಅವರದ್ದೇ ಆಗಿರೋ ಸ್ವಾಭಿಮನವಿರುತ್ತೆ. ಯಾರು ಪರ್ಸನಲ್ ವಿಷಯ ಮಾತಾಡುವ ಹಕ್ಕು ಇಲ್ಲ. ತುಂಬ ಪರ್ಸನಲ್ ಆಗಿ ಮಾತನಾಡಿದ್ದಾರೆ ಎಲ್ಲರಿಗೂ ಬೇಸರವಾಗುತ್ತೆ.
ಇದು ಸರಿಯಾದ ಸಮಯವಲ್ಲ ಮಾತಾಡಲು. ಯಾವುದೋ ವಿಷಯಕ್ಕೆ ಯಾರನ್ನೋ ಕರೆದುಕೊಂಡು ಬರೋದು ತಪ್ಪು. ಪ್ರಥಮ್ ಅವರಿಗೆ ಇದು ಒಳ್ಳೆ ಬೆಳವಣಿಗೆಯಲ್ಲ.
ಇದರಲ್ಲಿ ದರ್ಶನ್ ಅವರ ತಪ್ಪಿಲ್ಲ ಪ್ರಥಮ್ ಗೆ ಬೇಜಾರಾಗಿದೆ ಆದರೆ ಎಲ್ಲಾದಕ್ಕೂ ಲಿಮಿಟ್ ಇರುತ್ತೆ. ಈ ವಿಷಯದಿಂದ ಎಲ್ಲರಿಗೂ ಬೇಸರವಾಗುತ್ತೆ