ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಮುಂದೂಡಿಕೆ! ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ 14 ತಿಂಗಳಿಂದ ಸೆರೆಮನೆಯಲ್ಲಿ ಬಂಧಿಯಾಗಿದ್ದಾರೆ.
ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ನೀಡಬೇಕಿದ್ದ ತೀರ್ಪನ್ನು ಮುಂದೂಡಿಕೆ ಮಾಡಿದೆ.
ಆಗಸ್ಟ್ 1ಕ್ಕೆ ತೀರ್ಪು ಮುಂದೂಡಿಕೆ
ಪ್ರಜ್ವಲ್ ರೇವಣ್ಣ ಕೂಡ ಇಂದು ಕೋರ್ಟ್ಗೆ ಹಾಜರಾಗಿದ್ರು. ಪ್ರಜ್ವಲ್ ರಾಜಕೀಯ ಭವಿಷ್ಯಕ್ಕೂ ಈ ತೀರ್ಪು ಮಹತ್ವದ್ದಾಗಿದೆ.
ವಿಚಾರಣೆ ಆರಂಭವಾಗ್ತಿದ್ದಂತೆ ಎರಡೂ ಕಡೆ ವಕೀಲರಿಂದ ಕೆಲವು ಸ್ಪಷ್ಟನೆ ಕೇಳಿದ ನ್ಯಾಯಾಲಯ ಬಳಿಕ ಆಗಸ್ಟ್ 1ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.
ನ್ಯಾಯಾಧೀಶರ ಪ್ರಶ್ನೆ
ವಿಚಾರಣೆ ಆರಂಭವಾದ ಬಳಿಕ ಎರಡು ಕಡೆ ವಕೀಲರಿಂದ ವಾದ ಮಂಡನೆ ನಡೆದಿದೆ. ಗೂಗಲ್ ಸಂಸ್ಥೆ ಅಧಿಕೃತ ಮಾಹಿತಿ ಇಲ್ಲದೆ ದಾಖಲೆ ಪರಿಗಣಿಸಬಹುದೇ ಎಂದು ನ್ಯಾ. ಸಂತೋಷ್ ಗಜಾನನ ಭಟ್ ಪ್ರಶ್ನಿಸಿದ್ರು.
ಗೂಗಲ್ ಮ್ಯಾಪ್ ಹಾಗೂ ಎಫ್ಎಸ್ಎಲ್ ರಿಪೋರ್ಟ್ ಬಗ್ಗೆ ಕೋರ್ಟ್ ಸ್ಪಷ್ಟನೆ ಕೇಳಿದ್ದು, ತನಿಖಾಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
ಸ್ಪಷೀಕರಣ ಬೇಕಿದ್ದರಿಂದ ಇಂದು ತೀರ್ಪು ನೀಡಲು ಆಗಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಆಗಸ್ಟ್ 1ಕ್ಕೆ ಮತ್ತೆ ವಿಚಾರಣೆ
ಆಗಸ್ಟ್ 1ಕ್ಕೆ ತೀರ್ಪು ಮುಂದೂಡಿಕೆ ಆಗಿದ್ದು, ಶುಕ್ರವಾರ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
ಇದೀಗ ಪ್ರಜ್ವಲ್ಗೆ ಇನ್ನೆರಡುದಿನ ಟೆನ್ಷನ್ ಇರಲಿದೆ. ಕೋರ್ಟ್ನಿಂದ ಪರಪ್ಪನ ಅಗ್ರಹಾರ ಜೈಲಿಗೆ ಪ್ರಜಲ್ವ ರೇವಣ್ಣ ಅವರನ್ನು ಪೊಲೀಸರು ಶಿಫ್ಟ್ ಮಾಡಿದ್ದಾರೆ.